ಸುರಪುರ:ಹುಣಸಗಿ ಪೊಲೀಸರು ಇಂದು ಭರ್ಜರಿ ಬೇಟೆಯಾಡಿ 25 ಬೈಕ್ಗಳನ್ನು ಕದ್ದಿದ್ದ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಸೆಪ್ಟಂಬರ್ ತಿಂಗಳ 18 ಹಾಗೂ 19ರಂದು ಹುಣಸಗಿ ಬಸ್ ನಿಲ್ದಾಣದ ಬಳಿಯಲ್ಲಿ ದಿನಾಲೂ ಒಂದೊಂದು ಬೈಕ್ ಕಳ್ಳತನಾಗಿರುವ ಬಗ್ಗೆ ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು. ಬೈಕ್ ಕಳ್ಳತನ ಪ್ರಕರಣಗಳ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದ್ದ ಹುಣಸಗಿ ಪೊಲೀಸರು, ಯಾದಗಿರಿ ಎಸ್ಪಿ ರುಶಿಕೇಶ ಭಗವಾನ್ ಹಾಗೂ ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.
ಹುಣಸಗಿ ಸಿಪಿಐ ದವಲತ್ ಎನ್. ಕುರಿ ನೇತೃತ್ವದಲ್ಲಿ ತಂಡವೊಂದು ರಚನೆ ಮಾಡಲಾಗಿದ್ದು, ಪಿಎಸ್ಐ ಬಾಪುಗೌಡ ಪಾಟೀಲ್ ಅವರನ್ನೊಳಗೊಂಡ ತಂಡವು ನಿರಂತರವಾಗಿ ಕಾರ್ಯಾಚರಣೆ ನಡೆಸಿ ಇಂದು ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದ ಮೌನೇಶ್ ಎಂಬಾತ ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಮನಹಳ್ಳಿ ಗ್ರಾಮದವನಾದ ಮೌನೇಶ್ ಅಲಿಯಾಸ್ ಪಿಂಟ್ಯಾ ತಂದೆ ಜಗನ್ನಾಥ ಎಂಬುವವನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.