ಕರ್ನಾಟಕ

karnataka

ETV Bharat / state

ಪಿಂಚಣಿ ಹಣ ಸಿಎಂ ಪರಿಹಾರ ನಿಧಿಗೆ ಕೊಟ್ಟ ಅಶೋಕ್ ಕುಲಕರ್ಣಿ - Ashok Kulkarni gave the pension money to CM Relief Fund

ಸುರಪುರ ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಅಶೋಕ್ ಕುಲಕರ್ಣಿ, ಸಿಎಂ ಪರಿಹಾರ ನಿಧಿಗೆ ಪಿಂಚಣಿ ಹಣ ದೇಣಿಗೆ ನೀಡಿದ್ದಾರೆ.

ಸಿಎಂ ಪರಿಹಾರ ನಿಧಿಗೆ ಕೊಟ್ಟ ಅಶೋಕ್ ಕುಲಕರ್ಣಿ
ಸಿಎಂ ಪರಿಹಾರ ನಿಧಿಗೆ ಕೊಟ್ಟ ಅಶೋಕ್ ಕುಲಕರ್ಣಿ

By

Published : Apr 20, 2020, 6:36 PM IST

ಸುರಪುರ: ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಅಶೋಕ್ ಕುಲಕರ್ಣಿ ತಮ್ಮ ತಿಂಗಳ ಪಿಂಚಣಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾರೆ.

ನಗರದ ನಿವಾಸಿ ಅಶೋಕ್ ಕುಲಕರ್ಣಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಕಳೆದ 2015 ರಲ್ಲಿ ನಿವೃತ್ತಿ ಹೊಂದಿದ್ದರು. ತಮ್ಮ ತಿಂಗಳ ಪಿಂಚಣಿ ಹಣ 16,164 ರೂಪಾಯಿಯನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅಶೋಕ್ ಕುಲಕರ್ಣಿ, ಕೊರೊನಾ ದಿಂದ ರಾಜ್ಯದಲ್ಲಿ ದೊಡ್ಡ ನಷ್ಟವುಂಟಾಗಿದೆ. ನಮ್ಮ ಕುಟುಂಬಕ್ಕೆ ಒಂದು ತಿಂಗಳ ಬದುಕಿಗೆ ತೊಂದರೆಯಾದರೂ ಪರವಾಗಿಲ್ಲ. ಜನರಿಗೆ ನೆರವಾಗಲೆಂದು ನನ್ನ ಅಲ್ಪ ಸಹಾಯವನ್ನು ದೇಣಿಗೆಯಾಗಿ ಕೊಟ್ಟಿದ್ದೇನೆ. ಇದಕ್ಕೆ ಇಡೀ ನಮ್ಮ ಕುಟುಂಬದ ಸಹಕಾರವಿದೆ ಎಂದರು.

ABOUT THE AUTHOR

...view details