ಕರ್ನಾಟಕ

karnataka

ETV Bharat / state

ಯಾದಗಿರಿಯಲ್ಲಿ ಕೊರೊನಾಗೆ ವೃದ್ಧೆ ಬಲಿ: ರಾಜ್ಯದಲ್ಲಿ ಸಾವಿನ ಸಂಖ್ಯೆ 45 ಕ್ಕೆ ಏರಿಕೆ..‌!

ಕರ್ನಾಟಕದಲ್ಲಿ ಇಂದು 122 ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಯಾದಗಿರಿಯಲ್ಲಿ ಕೊರೊನಾಗೆ 69 ವರ್ಷದ ವೃದ್ಧೆ ಬಲಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿರುವ ಹಿನ್ನೆಲೆಯಿದ್ದು, ಮೇ 20 ರಂದು ಆಸ್ಪತ್ರೆಗೆ ಮರಣದ ನಂತರ ಕರೆತರಲಾಗಿದೆ.

122 new corona positive cases detected in Karnataka
ಯಾದಗಿರಿಯಲ್ಲಿ ಕೊರೊನಾಗೆ ವೃದ್ಧೆ ಬಲಿ

By

Published : May 27, 2020, 2:14 PM IST

Updated : May 27, 2020, 2:27 PM IST

ಯಾದಗಿರಿ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನ 122 ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಯಾದಗಿರಿಯಲ್ಲಿ ಕೊರೊನಾಗೆ 69 ವರ್ಷದ ವೃದ್ಧೆ ಸಾವನ್ನಪ್ಪಿದ್ದು, ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿರುವ ಹಿನ್ನೆಲೆಯಿದೆ.

ಇವರ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕ ರಾಜ್ಯದಲ್ಲಿ ಈವರೆಗೆ 45 ಮಂದಿ ಕೊರೊನಾಗೆ ಬಲಿಯಾದಂತಾಗಿದೆ. 1,596 ಜನರು‌ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ 762 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಇಂದು ದೃಢವಾಗಿರುವ ಪಾಸಿಟಿವ್ ಕೇಸ್​​​ಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶದ ಹಿನ್ನೆಲೆ ಹೊಂದಿರುವವರಾಗಿದ್ದಾರೆ.‌ ಬೆಂಗಳೂರಿನಲ್ಲಿ 6 ಕೇಸುಗಳು ದೃಢಪಟ್ಟಿದ್ದು, ನೇಪಾಳ, ಯುಎಇ, ಮಧ್ಯಪ್ರದೇಶ ಹಾಗೂ ತಮಿಳುನಾಡಿನ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

ಇನ್ನು ಮಹಾರಾಷ್ಟ್ರದಿಂದ ವಾಪಸ್ ಆದ ಯಾದಗಿರಿಯ ವಲಸೆ ಕಾರ್ಮಿಕರಲ್ಲಿ, ಇಂದು ಮತ್ತೆ 16 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 156 ಕ್ಕೆ ಏರಿಕೆಯಾಗಿದೆ. ಇಂದು 1 ಮತ್ತು 2 ವರ್ಷದ ಹೆಣ್ಣು ಮಕ್ಕಳಿಗೆ ಹಾಗೂ 3 ವರ್ಷದ ಗಂಡು ಮಗುವಿಗೆ ಕೊರೊನಾ ಸೋಂಕು ತಗುಲಿದೆ. ಇತ್ತೀಚೆಗೆ ಮಹಾರಾಷ್ಟ್ರದಿಂದ ಆಗಮಿಸಿದ ಕಾರ್ಮಿಕರನ್ನೆಲ್ಲಾ ಜಿಲ್ಲೆಯ ವಿವಿಧ ಕ್ವಾರೆಂಟನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಇಂದು ಇವರಲ್ಲಿ ಸೋಂಕು ದೃಡಪಟ್ಟಿದ್ದು, ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲೆಯ ನೂತನ ಜಿಲ್ಲಾ ಆಸ್ಪತ್ರೆಯ ಕೋವಿಡ್ -19 ವಾರ್ಡ್​​​ಗೆ ದಾಖಲಿಸಲಾಗಿದೆ.

Last Updated : May 27, 2020, 2:27 PM IST

ABOUT THE AUTHOR

...view details