ವಿಜಯಪುರ:ರಾಜ್ಯಾದ್ಯಂತ ಕೊರೊನಾ ಭೀತಿ ಹೆಚ್ಚಾಗಿದ್ದು, ಇದರ ನಡುವೆ ವ್ಯಕ್ತಿಯೊಬ್ಬ ಮಟನ್ ಮೇಲಿನ ಆಸೆಯಿಂದ ಕುರಿ ಕದಿಯಲು ಹೋಗಿ ಗ್ರಾಮಸ್ಥರಿಂದ ಧರ್ಮದೇಟು ತಿಂದಿರುವ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗೆಣ್ಣೂರು ಗ್ರಾಮದಲ್ಲಿ ನಡೆದಿದೆ.
ಮಟನ್ ಮೇಲೆ ಆಸೆ : ಕುರಿ ಕಳ್ಳತನಕ್ಕೆ ಯತ್ನಿಸಿ ಧರ್ಮದೇಟು ತಿಂದ ಖದೀಮ - ವಿಜಯಪುರ ಲೇಟೆಸ್ಟ್ ನ್ಯೂಸ್
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗೆಣ್ಣೂರು ಗ್ರಾಮದಲ್ಲಿ ಕುರಿ ಕದಿಯಲು ಹೋಗಿ ಗ್ರಾಮಸ್ಥರಿಂದ ಧರ್ಮದೇಟು ತಿಂದಿರುವ ಘಟನೆ ನಡೆದಿದೆ.
ಕುರಿ ಕಳ್ಳತನಕ್ಕೆ ಯತ್ನಿಸಿ ಧರ್ಮದೇಟು ತಿಂದ ಖದೀಮ
ಕೊಲ್ಹಾರ ಪಟ್ಟಣ ನಿವಾಸಿಯಾದ ಮಂಜುನಾಥ ಭಜಂತ್ರಿ ಎಂಬ ವ್ಯಕ್ತಿ ಮಟನ್ ತಿನ್ನಬೇಕೆಂಬ ಆಸೆಯಿಂದ ನಿನ್ನೆ ರಾತ್ರಿ ಗೆಣ್ಣೂರು ಪಟ್ಟಣದಲ್ಲಿ ಕುರಿ ಕಳ್ಳತನ ಮಾಡಲು ಬಂದಿದ್ದಾನೆ. ಈ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದು, ಖದೀಮನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಚಳಿ ಬಿಳಿಸಿದ್ದಾರೆ.
ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.