ವಿಜಯಪುರ :ದೆಹಲಿಯ ಏಮ್ಸ್ ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಿದ್ದ ಪ್ರವೇಶ ಪರೀಕ್ಷೆಯಲ್ಲಿ ವಿಜಯಪುರದ ವೈದ್ಯಕೀಯ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿದ್ದಾಳೆ.
ಏಮ್ಸ್ ಪರೀಕ್ಷೆಯಲ್ಲಿ ವಿಜಯಪುರದ ಯುವತಿ ದೇಶಕ್ಕೆ ಪ್ರಥಮ
ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಎಂಡಿ, ಪಾಂಡಿಚೇರಿಯ ಜಿಪ್ಮೇರ್ (JIPMER)ನಲ್ಲಿ ಫೆಲೋಷಿಪ್ ಇನ್ ಕ್ರಿಟಿಕಲ್ ಕೇರ್ ಹಾಗೂ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಫೆಲೋಷಿಪ್ ಇನ್ ನ್ಯೂರೋ ಕ್ರಿಟಿಕಲ್ ಕೇರ್ನಲ್ಲಿ ವ್ಯಾಸಂಗ ಮಾಡಿದ್ದಾರೆ..
ವಿಜಯಪುರದ ದಿವ್ಯಾ ಅರವಿಂದ ಹಿರೊಳ್ಳಿ ಡಿಎಂ ಜನರಲ್ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಏಮ್ಸ್ ನವೆಂಬರ್ 20ರಂದು ಪರೀಕ್ಷೆ ನಡೆಸಿತ್ತು. ದಿವ್ಯಾ ಶೇ.67.08 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ದಿವ್ಯಾ ವಿಜಯಪುರದ ಸೆಷನ್ಸ್ ಕೋರ್ಟ್ನಲ್ಲಿ ಹಿರಿಯ ವಕೀಲರಾಗಿರುವ ಅರವಿಂದ ಹಿರೊಳ್ಳಿ ಅವರ ಪುತ್ರಿಯಾಗಿದ್ದು, ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಎಂಡಿ, ಪಾಂಡಿಚೇರಿಯ ಜಿಪ್ಮೇರ್ (JIPMER)ನಲ್ಲಿ ಫೆಲೋಷಿಪ್ ಇನ್ ಕ್ರಿಟಿಕಲ್ ಕೇರ್ ಹಾಗೂ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಫೆಲೋಷಿಪ್ ಇನ್ ನ್ಯೂರೋ ಕ್ರಿಟಿಕಲ್ ಕೇರ್ನಲ್ಲಿ ವ್ಯಾಸಂಗ ಮಾಡಿದ್ದಾರೆ.