ಕರ್ನಾಟಕ

karnataka

By

Published : Jul 13, 2020, 1:57 PM IST

ETV Bharat / state

ವಿಜಯಪುರ: ಬೋಟಿಂಗ್​ ಇಲ್ಲದೇ ಬಣಗುಡುತ್ತಿದೆ ಬೇಗಂ ತಲಾಬ್ ಕೆರೆ

ವಿಜಯಪುರ ನಗರದ ಹೊರವಲಯದಲ್ಲಿರುವ ಬೇಗಂ ತಲಾಬ್ ಕೆರೆ ಪ್ರವಾಸಿಗರ ಕೊರತೆ ಎದುರಿಸುತ್ತಿದೆ. ಲಾಕ್​ಡೌನ್​ ಸಡಿಲಿಸಿ ಪ್ರವಾಸಿ ಕೇಂದ್ರ ಮತ್ತೆ ಆರಂಭವಾದರೂ ಜಿಲ್ಲಾಡಳಿತ ಬೋಟಿಂಗ್ ಯಾವಾಗ ಆರಂಭಿಸುತ್ತದೆಯೋ ಎಂದು ಎದುರು ನೋಡುವಂತಾಗಿದೆ.

Vijayapura: Begum Talab Lake without boating
ವಿಜಯಪುರ: ಬೋಟಿಂಗ್​ ಇಲ್ಲದೆ ಬಣಗುಡುತ್ತಿದೆ ಬೇಗಂ ತಲಾಬ್ ಕೆರೆ

ವಿಜಯಪುರ:ಕಳೆದ ವರ್ಷ ವಿಶ್ವ ಪ್ರವಾಸಿ ದಿನದಂದು ಐತಿಹಾಸಿಕ ಬೇಗಂ ತಲಾಬ್ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡುವ ಮೂಲಕ ಆದಿಲ್‌ ಶಾಹಿ ಕಾಲದ ಕೆರೆಗೆ ಜೀವ ತುಂಬಲಾಯಿತು. ಸದ್ಯ ಕೊರೊನಾ ಭೀತಿಯಿಂದ ಜಿಲ್ಲಾಡಳಿತ ಬೋಟಿಂಗ್ ವ್ಯವಸ್ಥೆ ಸ್ಥಗಿತಗೊಳಿಸಿದೆ. ಇತ್ತ ಪ್ರವಾಸಿಗರ ಕೊರತೆಯೂ ಎದುರಾಗಿದ್ದು, ಬೇಗಂ ತಲಾಬ್ ಕೆರೆಯಲ್ಲಿ ಬೋಟಿಂಗ್ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.

ವಿಜಯಪುರ: ಬೋಟಿಂಗ್​ ಇಲ್ಲದೇ ಬಣಗುಡುತ್ತಿದೆ ಬೇಗಂ ತಲಾಬ್ ಕೆರೆ

ವಿಜಯಪುರ ನಗರದ ಹೊರವಲಯದಲ್ಲಿರುವ ಬೇಗಂ ತಲಾಬ್ ಕೆರೆ ಪ್ರವಾಸಿಗರ ಕೊರತೆ ಎದುರಿಸುತ್ತಿದೆ. ಲಾಕ್​ಡೌನ್​ ಸಡಿಲಿಸಿ ಪ್ರವಾಸಿ ಕೇಂದ್ರ ಮತ್ತೆ ಆರಂಭವಾದ್ರೂ ಜಿಲ್ಲಾಡಳಿತ ಬೋಟಿಂಗ್ ಯಾವಾಗ ಆರಂಭಿಸುತ್ತದೆಯೋ ಎಂದು ಎದುರು ನೋಡುವಂತಾಗಿದೆ.

ಅದಿಲ್ ಶಾಹಿ ಕಾಲದ ಬೇಗಂ ತಲಾಬ್ ಕೆರೆಯು ಒಟ್ಟು 234 ಎಕರೆ ಪ್ರದೇಶದಲ್ಲಿದ್ದು, ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕೆರೆಗೆ ನೀರು ತುಂಬಿಸುವ ಮೂಲಕ ಹೊಸ ರೂಪ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಕೈ ಬಿಸಿ ಕರೆಯುವ ಕೇಂದ್ರವಾಗಿ ಮಾರ್ಪಟ್ಟಿತು. ಇನ್ನು ಖಾಸಗಿ ಕಂಪನಿಗೆ‌ ಬೋಟಿಂಗ್ ವ್ಯವಸ್ಥೆ ಗುತ್ತಿಗೆ ನೀಡಿದ್ದು, ಬೋಟಿಂಗ್ ಆರಂಭಿಸಿದ್ರೆ ಜಿಲ್ಲಾಡಳಿತಕ್ಕೂ ಆದಾಯ ಬರುತ್ತೆ ಜನರಿಗೂ ಮನರಂಜನೆ ಸಿಗುತ್ತದೆ ಎಂದು ಸ್ಥಳೀಯರು ಬಯಸುತ್ತಿದ್ದಾರೆ.

ABOUT THE AUTHOR

...view details