ಕರ್ನಾಟಕ

karnataka

ETV Bharat / state

ವಿಜಯಪುರ: ಜೆಸಿಬಿ ಯಂತ್ರದಲ್ಲಿ ಸಿಲುಕಿ ಚಾಲಕ, ಪೌರ ಕಾರ್ಮಿಕ ದಾರುಣ ಸಾವು - ದುರಸ್ಥಿ ಕಾರ್ಯ ಮಾಡುವ ವೇಳೆ ಜೆಸಿಬಿಯಲ್ಲಿ ಸಿಲುಕಿ ಇಬ್ಬರು ಸಾವು ಸುದ್ದಿ

ವಿಜಯಪುರ ನಗರದ ಇಂಡಿ ರಸ್ತೆ ಬಳಿಯ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕದಲ್ಲಿ ದುರಸ್ಥಿ ಕಾರ್ಯ ಮಾಡುವ ಸಂದರ್ಭದಲ್ಲಿ ಭೀಕರ ಅನಾಹುತ ಸಂಭವಿಸಿದೆ.

ಜೆಸಿಬಿಯಲ್ಲಿ ಸಿಲುಕಿ ಇಬ್ಬರು ಸಾವು
ಜೆಸಿಬಿಯಲ್ಲಿ ಸಿಲುಕಿ ಇಬ್ಬರು ಸಾವು

By

Published : Sep 8, 2021, 6:16 PM IST

Updated : Sep 8, 2021, 6:48 PM IST

ವಿಜಯಪುರ:ದುರಸ್ಥಿ ಕಾರ್ಯ ಮಾಡುವ ವೇಳೆ ಅವಘಡ ಸಂಭವಿಸಿದ್ದು, ಜೆಸಿಬಿ ಯಂತ್ರದಲ್ಲಿ ಸಿಲುಕಿ ಓರ್ವ ಚಾಲಕ ಹಾಗೂ ಓರ್ವ ಪೌರ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಗರದ ಇಂಡಿ ರಸ್ತೆ ಬಳಿಯ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕದಲ್ಲಿ ಈ ಘಟನೆ ಜರುಗಿದೆ. ದುರಸ್ಥಿ ಕಾರ್ಯದ ಸಂದರ್ಭದಲ್ಲಿ ಜೆಸಿಬಿ ಯಂತ್ರದಲ್ಲಿ ಸಿಲುಕಿದ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.

ಜೆಸಿಬಿಯಲ್ಲಿ ಸಿಲುಕಿ ಇಬ್ಬರು ಸಾವು

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಘಟಕದಲ್ಲಿ ಜೆಸಿಬಿ ಡೋಸರ್​ನ ಹೈಡ್ರಾಲಿಕ್​ನಲ್ಲಿ ಸಿಲುಕಿ ರಫಿಕ್ (35) ಹಾಗೂ ಅಯುಬ್ (50) ಮೃತಪಟ್ಟಿದ್ದಾರೆ.

ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಎಪಿಎಂ‌ಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಉತ್ತರ ಕರ್ನಾಟಕದ 'ಧಾರವಾಡಿ ಎಮ್ಮೆ' ತಳಿಗೆ ರಾಷ್ಟ್ರಮಟ್ಟದ ಮಾನ್ಯತೆ

Last Updated : Sep 8, 2021, 6:48 PM IST

ABOUT THE AUTHOR

...view details