ವಿಜಯಪುರ:ಮನೆಶಾಂತಿ ಕಾರ್ಯಕ್ರಮದಲ್ಲಿ ಕುದಿಯುವ ಸಾಂಬಾರ್ ಪಾತ್ರೆ ಮೇಲೆ ಟೆಂಟ್ ಬಿದ್ದು ಅಡುಗೆ ಮಾಡುವ ಮೂವರು ಮಹಿಳೆಯರಿಗೆ ಗಾಯವಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಕೂಳರಗಿ ಗ್ರಾಮದಲ್ಲಿ ನಡೆದಿದೆ.
ಬಿಸಿ ಸಾಂಬಾರ್ ಪಾತ್ರೆ ಮೇಲೆ ಉರುಳಿದ ಟೆಂಟ್: 3 ಮಹಿಳೆಯರಿಗೆ ಗಾಯ - ಮೂವರು
ಸಾಂಬಾರ್ ಕಾಯಿಸಿದ ಪಾತ್ರೆಯ ಮೇಲೆ ಟೆಂಟ್ ಬಿದ್ದ ಪರಿಣಾಮ ಅಡುಗೆ ಮಾಡುವ ಮೂವರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ.
ಸಾಂಬಾರ್ ಕಾಯಿಸಿದ ಪಾತ್ರೆಯ ಮೇಲೆ ಟೆಂಟ್ ಬಿದ್ದ ಪರಿಣಾಮ ಮೂವರು ಮಹಿಳೆಯರಿ ಗಾಯ
ಅಡಿಗೆ ಮಾಡುವ ಟೆಂಟ್ ಗಾಳಿಗೆ ಕುಸಿದು ಅವಘಡ ಸಂಭವಿಸಿದೆ. ಸಾಂಬಾರ್ ಕಾಯಿಸಿದ ಪಾತ್ರೆಯ ಮೇಲೆ ಟೆಂಟ್ ಬಿದ್ದ ಪರಿಣಾಮ ಈ ದುರ್ಘಟನೆಗಳನ್ನು ಸಂಭವಿಸಿದೆ.
ಶಿವಶಂಕರ ಮಖನಾಪುರ ಎಂಬುವವರ ಮನೆಯ ಶಾಂತಿ ಕಾರ್ಯಕ್ರಮದಲ್ಲಿ ಘಟನೆ ನೆಡೆದಿದ್ದು.ಗಾಯಾಳುಗಳನ್ನ ಸಾಗಿಸಲು 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದರೂ ಅಂಬ್ಯುಲೆನ್ಸ್ ಬಾರದ ಕಾರಣ ಖಾಸಗಿ ವಾಹನದಲ್ಲಿ ಗಾಯಾಳು ರವಾನೆ ಮಾಡಲಾಯಿತು. ನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು.ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.