ವಿಜಯಪುರ: ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಪ್ರಾಥಮಿಕ ಶಾಲಾ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಡಗಾನೂರ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.
ಹೊರ್ತಿ ಗ್ರಾಮದ ಗುರುಲಿಂಗಯ್ಯ ರಾಚಯ್ಯ ಗುಡಿ ಮೃತಪಟ್ಟವರು. ಇವರು ಪತ್ನಿಯ ಮನೆ ಇರುವ ಶಿವಣಗಿ ಗ್ರಾಮಕ್ಕೆ ತೆರಳುವಾಗ ಅವಘಡ ಸಂಭವಿಸಿದೆ ಎನ್ನಲಾಗಿದೆ.