ಕರ್ನಾಟಕ

karnataka

ETV Bharat / state

ಅನಾವಶ್ಯಕ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬೇಡಿ, ವ್ಯತಿರಿಕ್ತ ಪರಿಣಾಮ ಬೀರುತ್ತೆ: ಸರ್ಜನ್ ಶರಣಪ್ಪ ಕಟ್ಟಿ - CT scan

ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದ 1,800 ರಿಂದ 2,000 ಜನರು ಸಿಟಿ ಸ್ಕ್ಯಾನ್‌ ಮಾಡಿಸಿಕೊಳ್ಳುತ್ತಿದ್ದಾರೆ. ಒಂದು ಸಿಟಿ ಸ್ಕ್ಯಾನ್​ನಿಂದ 200 ರಿಂದ 300 ಎಕ್ಸ್​​​ರೇ ರೇಡಿಯೇಷನ್​ನಷ್ಟು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ, ಅವಶ್ಯಕತೆ ಇದ್ದರೆ ಮಾತ್ರ ಸಿಟಿ ಸ್ಕ್ಯಾನ್‌ ಮಾಡಿಸಿ ಎಂದು ಜಿಲ್ಲಾ ಸರ್ಜನ್ ಶರಣಪ್ಪ ಕಟ್ಟಿ ಮನವಿ ಮಾಡಿದರು.

Vijayapura
ಸರ್ಜನ್ ಶರಣಪ್ಪ ಕಟ್ಟಿ

By

Published : May 3, 2021, 10:45 AM IST

ವಿಜಯಪುರ: ಕೋವಿಡ್ ಎರಡನೇ ಅಲೆ ಆರಂಭವಾದಾಗಿನಿಂದ ಸಿಟಿ ಸ್ಕ್ಯಾನ್‌ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ಜಿಲ್ಲಾ ಸರ್ಜನ್ ಶರಣಪ್ಪ ಕಟ್ಟಿ ಹೇಳಿದರು.

ಸರ್ಜನ್ ಶರಣಪ್ಪ ಕಟ್ಟಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್​ ಬರುವುದಕ್ಕಿಂತ ಮೊದಲು ತಿಂಗಳಿಗೆ 1,000 ದಿಂದ 1,200 ಜನರು ಸಿಟಿ ಸ್ಕ್ಯಾನ್‌ ಮಾಡಿಸಿಕೊಳ್ಳುತ್ತಿದ್ದರು. ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದ 1,800 ರಿಂದ 2,000 ಜನರು ಸಿಟಿ ಸ್ಕ್ಯಾನ್‌ ಮಾಡಿಸಿಕೊಳ್ಳುತ್ತಿದ್ದಾರೆ. ನಿತ್ಯ 20 ರಿಂದ 25 ಜನರು ಭಯದಿಂದ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುತ್ತಿದ್ದಾರೆ.

ಒಂದು ಸಿಟಿ ಸ್ಕ್ಯಾನ್​ನಿಂದ 200 ರಿಂದ 300 ಎಕ್ಸ್​​​ರೇ ರೇಡಿಯೇಷನ್​ನಷ್ಟು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ, ಸುಖಾಸುಮ್ಮನೆ ಸಿಟಿ ಸ್ಕ್ಯಾನ್ ಮಾಡಿಸಬಾರದು. ಕೋವಿಡ್ ಪೀಡಿತರೊಂದಿಗೆ ಸಂಪರ್ಕ ಬಂದ ತಕ್ಷಣ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಾರದು. ಸ್ವಲ್ಪ ದಿನಗಳ ಕಾಲ ಕಾದು ಸಿಟಿ ಸ್ಕ್ಯಾನ್ ಮಾಡಿಸಿದರೆ ಸರಿಯಾದ ಮಾಹಿತಿ ಲಭ್ಯವಾಗುತ್ತದೆ. ಅವಶ್ಯಕತೆ ಇದ್ದರೆ ಮಾತ್ರ ಮಾಡಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ಮಗಳ ಕಣ್ಣ ಮುಂದೆಯೇ ತಂದೆಯ ಪ್ರಾಣ ತೆಗೆದ ಕೊರೊನಾ

ABOUT THE AUTHOR

...view details