ಕರ್ನಾಟಕ

karnataka

ETV Bharat / state

ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ: ಅಗ್ನಿ ಕುಂಡದ ಮೇಲೆ ನಡೆದ ಸಾವಿರಾರು ಭಕ್ತರು!

ಮುದ್ದೇಬಿಹಾಳದ ಬನಶಂಕರಿ ನಗರದಲ್ಲಿರುವ ಶ್ರೀ ಬನಶಂಕರಿ ದೇಗುಲದ ಆವರಣದಲ್ಲಿ ಅಗ್ನಿ ಕುಂಡ ಹಾಯುವ ಕಾರ್ಯಕ್ರಮ ನಡೆಸಲಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

shri-banashankari-devi-fair-in-muddebihal
ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ: ಅಗ್ನಿ ಕುಂಡದ ಮೇಲೆ ನಡೆದ ಸಾವಿರಾರು ಭಕ್ತರು

By

Published : Jan 28, 2021, 6:56 AM IST

ಮುದ್ದೇಬಿಹಾಳ (ವಿಜಯಪುರ):ಪಟ್ಟಣದ ಶ್ರೀ ಬನಶಂಕರಿ ದೇವಿ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಅಗ್ನಿ ಕುಂಡ ಹಾಯುವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು‌.

ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ: ಅಗ್ನಿ ಕುಂಡದ ಮೇಲೆ ನಡೆದ ಸಾವಿರಾರು ಭಕ್ತರು

ಬನಶಂಕರಿ ನಗರದಲ್ಲಿರುವ ದೇಗುಲದ ಆವರಣದಲ್ಲಿ ಅಗ್ನಿಕುಂಡ ಸಿದ್ಧಪಡಿಸಿ, ಭಕ್ತಾದಿಗಳು ಅದರ ಮೇಲೆ ಬರಿಗಾಲಲ್ಲಿ ನಡೆಯುವುದು ವಾಡಿಕೆ. ಭಕ್ತರು ತಾವು ಬೇಡಿಕೊಂಡ ಹರಕೆ ತೀರಲೆಂದು ಅಗ್ನಿ ಕುಂಡ ಹಾಯುತ್ತಾರೆ. ಅಗ್ನಿ ಕುಂಡ ಹಾಯುವ ಕಾರ್ಯಕ್ರಮದ ಬಳಿಕ ಪಲ್ಲಕ್ಕಿಯ ಉತ್ಸವ ನಡೆಸಲಾಯಿತು.

ಓದಿ:ಹರಕೆ ತೀರಿಸಲು ಈ ದೇವಿಗೆ ಕಲ್ಲು ಅರ್ಪಿಸುತ್ತಾರೆ ಭಕ್ತರು!

ಇಂದು ಸಂಜೆ ಶ್ರೀ ಬನಶಂಕರಿ ದೇವಿ ರಥೋತ್ಸವ ನಡೆಯಲಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ABOUT THE AUTHOR

...view details