ಕರ್ನಾಟಕ

karnataka

By

Published : Feb 13, 2021, 11:32 AM IST

ETV Bharat / state

ಮತ್ತೆ ಮರುಜೀವ ಪಡೆದುಕೊಂಡ ಆರ್​ಎಂಎಸ್ಎ ಶಾಲೆ.. ಆದ್ರೆ ಈ ಸಮಸ್ಯೆಗೆ ಪರಿಹಾರ ಯಾವಾಗ..!!?

ಹಲವಾರು ಸಮಯದಿಂದ ನನೆಗುದಿಗೆ ಬಿದ್ದಿದ್ದ ಶಾಲಾ ಕಾಮಗಾರಿ ಇದೀಗ ಮರು ಜೀವ ಪಡೆದುಕೊಂಡಿದೆ. ಆದರೆ ಶಾಲೆಯಲ್ಲಿ ಯಾವೊಂದೂ ಮೂಲಭೂತ ಸೌಕರ್ಯಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

rmsa
ಆರ್​ಎಂಎಸ್ಎ ಶಾಲೆ

ಮುದ್ದೇಬಿಹಾಳ(ವಿಜಯಪುರ):ತಾಲೂಕಿನ ಬಿದರಕುಂದಿಯಲ್ಲಿರುವ ಆದರ್ಶ ವಿದ್ಯಾಲಯ (ಆರ್​ಎಂಎಸ್ಎ)ಕ್ಕೆ ಕಳೆದ ಮೂರು ವರ್ಷಗಳ ಹಿಂದಷ್ಟೇ ಈ ಶಾಲೆಗೆ ಹೋಗಲು ದಾರಿ ಎಲ್ಲಿದೆ ? ಹೇಗೆ ಹೋಗುವುದು ? ಯಾರು ದಾರಿ ಬಿಟ್ಟುಕೊಡುತ್ತಾರೆ ಎಂದು ಹಲವಾರು ಬಾರಿ ಚರ್ಚೆ ನಡೆಸಿ, ದಾರಿ ಇಲ್ಲದೇ ಶಾಲಾ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಅಂದು ಪುಂಡಪೋಕರಿಗಳ ತಾಣವಾಗಿದ್ದ ಶಾಲೆಯ ಕಟ್ಟಡವೀಗ ಮತ್ತೆ ಮರುಜೀವ ಪಡೆದುಕೊಂಡಿದೆ.

ಮೂಲಭೂತ ಸೌಕರ್ಯಗಳಿಲ್ಲದಆರ್​ಎಂಎಸ್ಎ ಶಾಲೆ

ಇದೀಗ ಶಾಲೆಗೆ ಹೋಗಲು ಇದ್ದ ಬಹುದೊಡ್ಡ ಅಡ್ಡಿಯನ್ನು ಹಾಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ನಿವಾರಿಸಿದ್ದು, ಶಾಲೆಯ ಸಮೀಪದಲ್ಲಿರುವ ಜಮೀನುಗಳ ಮಾಲೀಕರ ಮನವೊಲಿಸುವ ಮೂಲಕ ರಸ್ತೆ ನಿರ್ಮಿಸಲು ಇದ್ದ ವಿಘ್ನವನ್ನು ನಿವಾರಿಸಿದ್ದಾರೆ. ಏತನ್ಮಧ್ಯೆ ಆರ್​ಎಂಎಸ್​ಎ ಶಾಲೆಗೆ ಹೋಗುವ ಒಂದು ಕಿ.ಮೀ ರಸ್ತೆ ಇದೀಗ ಪೂರ್ಣ ರೂಪದಲ್ಲಿ ನಿರ್ಮಾಣಗೊಂಡಿದ್ದು ಶಾಲೆಗೆ ಅರ್ಧ ಗಂಟೆಯಲ್ಲಿಯೇ ಕ್ರಮಿಸಬಹುದಾಗಿದೆ.

ರಸ್ತೆ ನಿರ್ಮಾವಾಯಿತು ಆದ್ರೆ

ಆರ್​ಎಂಎಸ್​ಎ ಶಾಲೆಯ ಕಟ್ಟಡ ಕಳೆದ ಐದಾರು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಕಾರಣ ಈ ಶಾಲೆಗೆ ಹೋಗಲು ರಸ್ತೆಯ ಸಂಪರ್ಕದ ತೊಂದರೆ ಇತ್ತು. ಹೀಗಾಗಿ ಕಾಮಗಾರಿ ವಿಳಂಬವಾಗಿದೆ ಎನ್ನುತ್ತಾರೆ ಗುತ್ತಿಗೆದಾರರ ಕಡೆಯವರು.

ಶಾಲೆ ಮೂರು ಮಹಡಿಗಳನ್ನು ಹೊಂದಿದ್ದು ಕೆಳ ಮಹಡಿಯಲ್ಲಿರುವ ಶೌಚಾಲಯಗಳಿಗೆ ಕೆಲಸ ಪೂರ್ಣಗೊಂಡಿದೆ. ಮೇಲಿನ ಎರಡು ಮಹಡಿಗಳಲ್ಲಿನ ಶೌಚಗೃಹದ ಕೆಲಸ ಬಾಕಿ ಉಳಿದುಕೊಂಡಿದೆ. ಅಲ್ಲದೇ ಅಲ್ಲಲ್ಲಿ ಟೈಲ್ಸ್​ಗಳು ಕಿತ್ತು ಹೋಗಿವೆ. ಕಟ್ಟಡಕ್ಕೆ ಹಚ್ಚಿದ್ದ ಬಣ್ಣ ಕೂಡಾ ಕಳಚಿದೆ.

ಕಟ್ಟಡದಲ್ಲಿ ಬಿರುಕು :

ಶಾಲೆಯ ಕಟ್ಟಡ ಗುಣಮಟ್ಟದ್ದಾ ಇಲ್ಲವೋ ಎಂಬುದರ ಬಗ್ಗೆ ನೋಡಿದವರಿಗೆ ಅರ್ಥವಾಗುತ್ತದೆ. ಮೇಲ್ಮಹಡಿಗೆ ಹೋಗುವ ಮಾರ್ಗದಲ್ಲಿ ಬಿರುಕು ಕಂಡು ಬಂದಿದೆ. ವಿದ್ಯುತ್ ಸಂರ್ಪಕಕ್ಕೆ ಹಾಕಿದ್ದ ವೈರ್ ಕಿತ್ತಿದ್ದು ನೇತಾಡುತ್ತಿವೆ.

ಕುಡಿಯುವ ನೀರಿನ ಸಮಸ್ಯೆ:

ಆರ್​ಎಂಎಸ್ಎ ಶಾಲೆಗೆ ಬಹುದೊಡ್ಡ ಸಮಸ್ಯೆ ಎಂದರೆ ಕುಡಿಯುವ ನೀರಿನದ್ದು. ಈಗಾಗಲೇ ಎರಡು ಬೋರವೆಲ್ ಕೊರೆಯಿಸಿದರೂ ಅವು ವಿಫಲವಾಗಿವೆ. ಶಾಲೆಗೆ ಮಕ್ಕಳು ಸ್ಥಳಾಂತರವಾದರೆ ಅವರಿಗೆ ಬಹುಮುಖ್ಯವಾಗಿ ನೀರು ಬೇಕು. ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಗ್ರಾ.ಪಂ ಆಡಳಿತ ಮಾಡಬೇಕಿದೆ. ಸದ್ಯಕ್ಕೆ ಗುತ್ತಿಗೆದಾರರ ಕಡೆಯವರು ಟ್ಯಾಂಕರ್ ಮೂಲಕ ನೀರು ತುಂಬಿಕೊoಡು ತಂದು ಕ್ಯೂರಿಂಗ್ ಮಾಡುತ್ತಿದ್ದಾರೆ. ಕಟ್ಟಡದ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಬಸರಕೋಡ ಕ್ರಾಸ್ ಬಳಿ ಇರುವ ಬೋರವೆಲ್‌ನಿಂದ ಶಾಲೆಗೆ ಪೈಪ್​ಲೈನ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ ಮುದಗಲ್ ಮಾಹಿತಿ ನೀಡಿದ್ದಾರೆ ಎಂದು ಆರ್.ಎಂ.ಎಸ್.ಎ ಶಾಲೆಯ ಮುಖ್ಯಗುರು ಮಾತೆ ಎನ್.ಬಿ.ತೆಗ್ಗಿನಮಠ ತಿಳಿಸಿದ್ದಾರೆ.

ಶಾಲೆ ಎಲ್ಲಿ ನಡೆಯುತ್ತಿರುವುದು

ಸದ್ಯಕ್ಕೆ ಕಟ್ಟಡದ ಕೊರತೆಯಿಂದ ಮುದ್ದೇಬಿಹಾಳ ಪಟ್ಟಣದ ಸರಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒಟ್ಟು 400 ವಿದ್ಯಾರ್ಥಿಗಳಿದ್ದು 18 ಶಿಕ್ಷಕರ ಮಂಜೂರಾತಿಯಲ್ಲಿ ಇಬ್ಬರು ವಿಜ್ಞಾನ ಶಿಕ್ಷಕರ ಕೊರತೆ ಇದೆ. ಶಿಕ್ಷಕರು, ಸಿಬ್ಬಂದಿ ಸೇರಿ ಒಟ್ಟು 15 ಜನ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಗ್ರಂಥಾಲಯ, ಪ್ರಯೋಗಾಲಯದ ಕೊರತೆ ಇದೆ.

ABOUT THE AUTHOR

...view details