ವಿಜಯಪುರ: ಹಾಸ್ಯನಟ ರಾಜು ತಾಳಿಕೋಟೆ ಮೇಲಿನ ಹಲ್ಲೆ ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಸಂಬಂಧಿ ಶೇಖ್ ಮೋದಿ, ರಾಜು ಅವರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದೆ ಎಂಬುದೆಲ್ಲ ಸುಳ್ಳು. ನನ್ನ ಬಳಿ ಲೈಸೆನ್ಸ್ ಹೊಂದಿರೋ ರಿವಾಲ್ವರ್ ಇದೆ. ನಾನು ರಾಜು ತಾಳಿಕೋಟೆಗೆ ಯಾವುದೇ ರೀತಿ ಬೆದರಿಕೆ ಹಾಕಿಲ್ಲ ಎಂದಿದ್ದಾರೆ.
ರಾಜು ತಾಳಿಕೋಟೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ರಾಜು ತಾಳಿಕೋಟೆ ಅವರ ಮೂವರು ಸೊಸೆಯಂದಿರು ಈಗಾಗಲೇ ಅವರನ್ನು ಬಿಟ್ಟು ಹೋಗಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಕೂಲಂಕಷವಾಗಿ ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸನಾಳ ಸಹೂದರಿ ಪರೀದಾ ಮೋದಿ ಮಾತನಾಡಿ, ರಾಜು ತಾಳಿಕೋಟೆ ಹಾಗೂ ಆತನ ಕುಟುಂಬಸ್ಥರು ಸೇರಿ ನನ್ನ ತಂಗಿಗೆ ವಿಷ ಕುಡಿಸಿದ್ದಾರೆ. ನಾವು ಈ ಹಿಂದೆಯೇ ರಾಜು ತಾಳಿಕೋಟೆ ಕುಟುಂಬದ ವಿರುದ್ಧ ಮುಧೋಳ ಠಾಣೆಯಲ್ಲಿ ದೂರು ನೀಡಿದ್ದೇವೆ. ಇದೀಗ ಮತ್ತೆ ಕೌಟುಂಬಿಕ ಕಲಹ ಉಂಟಾಗಿ ಗಲಾಟೆಯಾಗಿದೆ. ರಾಜು ತಾಳಿಕೋಟೆ ನನ್ನ ತಾಯಿ ಹಾಗೂ ತಂಗಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.