ಕರ್ನಾಟಕ

karnataka

ETV Bharat / state

ವಿಜಯಪುರ: ಪಕ್ಷದ ಮುಖಂಡರೊಂದಿಗೆ ತಡರಾತ್ರಿ ಮಹತ್ವದ ಸಭೆ ನಡೆಸಿದ ರಾಹುಲ್​ ಗಾಂಧಿ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳು ಗೆಲ್ಲಲು ರಣತಂತ್ರ ರೂಪಿಸಿವಂತೆ ಪಕ್ಷದ ಮುಖಂಡರಿಗೆ ರಾಹುಲ್​ ಗಾಂಧಿ ಸೂಚನೆ ನೀಡಿದ್ದಾರೆ.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

By

Published : Apr 24, 2023, 8:41 AM IST

Updated : Apr 24, 2023, 10:48 AM IST

ಮಾಧ್ಯಮಗಳೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ

ವಿಜಯಪುರ:ಜಿಲ್ಲಾ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಗರದ ಸ್ಫೂರ್ತಿ ರೆಸಾರ್ಟ್​ನಲ್ಲಿ ತಡರಾತ್ರಿವರೆಗೂ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು. ಭಾನುವಾರ ಸಾಯಂಕಾಲ ಸಂಜೆ 5 ಗಂಟೆಯಿಂದ‌ 6-30ರವರೆಗೆ ನಗರದಲ್ಲಿ ರೋಡ್ ಶೋ ನಡೆಸಿದ ರಾಹುಲ್​ ಗಾಂಧಿ, ಬಳಿಕ ನಗರದ ಸ್ಫೂರ್ತಿ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದರು. ರೆಸಾರ್ಟ್​ನಲ್ಲೇ ಜಿಲ್ಲೆಯ ಕಾಂಗ್ರೆಸ್​ನ ಹಾಲಿ, ಮಾಜಿ ಶಾಸಕರು ಹಾಗೂ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದರು.

ತಡರಾತ್ರಿಯವರೆಗೂ ನಡೆದ ಸಭೆ:ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್, ಶಾಸಕ ಶಿವಾನಂದ ಪಾಟೀಲ್ ಯಶವಂತರಾಯಗೌಡ ಪಾಟೀಲ್, ಮಾಜಿ ಶಾಸಕ ಸಿಎಸ್ ನಾಡಗೌಡ ಸೇರಿದಂತೆ ಇತರ ಕ್ಷೇತ್ರಗಳ ಕಾಂಗ್ರೆಸ್​ ಅಭ್ಯರ್ಥಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ಹೆಚ್ಚಿನ ಸ್ಥಾನ ಗೆಲ್ಲಲು ರಣತಂತ್ರ ರೂಪಿಸಿವಂತೆ ಪಕ್ಷದ ಮುಖಂಡರೊಂದಿಗೆ ತಡರಾತ್ರಿವರೆಗೂ ಮಹತ್ವದ ಸಭೆ ನಡೆಸಿದರು.

ಇದನ್ನೂ ಓದಿ:ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ : ರಾಹುಲ್​ ಗಾಂಧಿ ವಾಗ್ದಾಳಿ

ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯ:ತಡರಾತ್ರಿವರೆಗೂ ಸ್ಥಳೀಯ ನಾಯಕರೊಂದಿಗೆ ನಡೆದ ಸಭೆಯಲ್ಲಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ರಣತಂತ್ರ ರೂಪಿಸಲಾಗಿದೆ. ಅಲ್ಲದೇ ಸ್ಥಳೀಯ ಪಕ್ಷದ ಮುಖಂಡರೊಂದಿಗೆ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ಬಗ್ಗೆ ರಾಹುಲ್​ ಗಾಂಧಿ ಮಾಹಿತಿ ಪಡೆದುಕೊಂಡಿದ್ದಾರೆ.

ಲಿಂಗಾಯತ ಮತಗಳ ಸೆಳೆಯಲು ಪ್ಲಾನ್​:ಜಿಲ್ಲೆಯಲ್ಲಿ ಲಿಂಗಾಯತ ಮತಗಳು ಹೆಚ್ಚಿದ್ದು, ಈ ಬಾರಿ ಹೆಚ್ಚಿನ ಲಿಂಗಾಯತ ಮತಗಳನ್ನು ಕಾಂಗ್ರೆಸ್ ನತ್ತ ಸೆಳೆಯುವಂತೆ ರಣತಂತ್ರ ರೂಪಿಸಲು ಪಕ್ಷದ ಮುಖಂಡರಿಗೆ ರಾಹುಲ್​ ಕರೆ ನೀಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಹೇಗೆ ಕಟ್ಟಿ ಹಾಕಬೇಕು ಎಂಬುದರ ಬಗ್ಗೆಯೂ ಪಕ್ಷದವರಿಗೆ ರಾಹುಲ್ ಗಾಂಧಿ ಕೆಲ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಗೆಲುವು ಗ್ಯಾರಂಟಿ:ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, "ನಾವು ರಾಜ್ಯದ ಜನರಿಗೆ ಹಲವು ಯೋಜನೆಗಳನ್ನು ನೀಡುವ ಭರವಸೆ ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇವುಗಳನ್ನು ಜಾರಿಗೆ ತರಲಾಗುವುದು. ಕಳೆದ ರಾತ್ರಿ ರಾಹುಲ್ ಗಾಂಧಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ರಾಜ್ಯದ ಕೆಲ ಹಿರಿಯ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಗೆಲ್ಲುವ ತಂತ್ರಗಾರಿಕೆ ಕುರಿತು ಮಾತುಕತೆ ನಡೆಸಿದ್ದಾರೆ. 8 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಬರುವುದು ಗ್ಯಾರಂಟಿ" ಎಂದರು.

ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ವಿರುದ್ದ ರಾಗಾ ವಾಗ್ದಾಳಿ:ಇದಕ್ಕೂ ಮುನ್ನ ಸಾರ್ವಜನಿಕ ಸಭೆಯಲ್ಲಿ ಭಾಗಿಯಾದ ರಾಹುಲ್​ ಗಾಂಧಿ, "ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ಇದು 40% ಕಮಿಷನ್ ಪಡೆಯುತ್ತಿದೆ. ಯಾವುದೇ ಕೆಲಸಕ್ಕೂ 40% ಕಮಿಷನ್​​ ಪಾವತಿ ಮಾಡಬೇಕು. ಪೊಲೀಸ್ ಸಬ್ ಇನ್ಸಪೆಕ್ಟರ್ ಆಗಬೇಕಾದರೆ 80 ಲಕ್ಷ ಲಂಚ ಪಡೆಯುತ್ತಾರೆ ಎಂದು ಆರೋಪಿಸಿದ್ದರು. ಈ ಬಾರಿ ಕಾಂಗ್ರೆಸ್​​ 150 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿನೆ ಮಾಡುತ್ತದೆ. 40% ಕಮಿಷನ್ ತೆಗೆದುಕೊಳ್ಳುವ ಸರ್ಕಾರಕ್ಕೆ 40 ಸೀಟ್​ಗಳು ಬರುವುದಿಲ್ಲ ಎಂದು ರಾಹುಲ್​ ಗಾಂದಿ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ:ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ : ರಾಹುಲ್​ ಗಾಂಧಿ ವಾಗ್ದಾಳಿ

Last Updated : Apr 24, 2023, 10:48 AM IST

ABOUT THE AUTHOR

...view details