ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕಳೆದ ತಿಂಗಳು ವೃತಪಟ್ಟಿದ್ದ ವೃದ್ಧೆಗೆ ಕೊರೊನಾ ಸೋಂಕು ದೃಢವಾಗಿದೆ. ಇಂದು ವೃದ್ಧೆಯ ವರದಿ ಸೇರಿ 6 ಜನರಲ್ಲಿ ಕೊರೊನಾ ದೃಢವಾಗಿದೆ. ಇವರಲ್ಲಿ ಮೂವರು ಪುರುಷರು, ಮೂವರು ಮಹಿಳೆಯರಿದ್ದಾರೆ. ಆರು ಜನರ ಪೈಕಿ 82 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ತಿಂಗಳು ವೃದ್ಧೆ ಮನೆಯಲ್ಲಿ ಸಾವನ್ನಪ್ಪಿದ್ದರು. ಈ ಮೂಲಕ ಸಾವಿನ ಸಂಖ್ಯೆ 6ಕ್ಕೆ ಏರಿದೆ.
ವಿಜಯಪುರದಲ್ಲಿ ಕೊರೊನಾಗೆ ಮತ್ತೊಂದು ಬಲಿ - vijayapura corona cases
ಕಳೆದ ತಿಂಗಳು ಮೃತಪಟ್ಟಿದ್ದ ವೃದ್ಧೆಯ ವರದಿ ಬಂದಿದ್ದು, ವೃದ್ಧೆಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ವೃದ್ಧೆಯ ವರದಿ ಸೇರಿ ಜಿಲ್ಲೆಯಲ್ಲಿಂದು 6 ಕೊರೊನಾ ಪ್ರಕರಣಗಳು ದೃಢವಾಗಿದ್ದು, ಸೋಂಕಿತರ ಸಂಖ್ಯೆ 193ಕ್ಕೆ ಏರಿಕೆಯಾಗಿದೆ.
ವಿಜಯಪುರದಲ್ಲಿ ಕೊರೊನಾಗೆ ಮತ್ತೊಂದು ಬಲಿ: ಕಳೆದ ತಿಂಗಳು ವೃತಪಟ್ಟಿದ್ದ ವೃದ್ಧೆಯಲ್ಲಿ ಕೊರೊನಾ ಪಾಸಿಟಿವ್
ಕಂಟೈನ್ಮೆಂಟ್ ಪ್ರದೇಶದ ನಿವಾಸಿಯಾಗಿದ್ದ ವೃದ್ಧೆಯನ್ನು ಅಂದೇ ಸರ್ಕಾರದ ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿತ್ತು. ಮೃತಪಟ್ಟಿದ್ದ ವೃದ್ಧೆಗೆ ಕೊರೊನಾ ಇರುವುದು ಇಂದು ದೃಢವಾಗಿದೆ. ಇತರೆ ಸೋಂಕಿತ ಐವರು ಮಹಾರಾಷ್ಟ್ರದಿಂದ ವಾಪಸ್ ಬಂದವರು. ಇವರು ಸಹ ನಗರದ ಕಂಟೈನ್ಮೆಂಟ್ ಏರಿಯಾದವರು. ಈ 6 ಜನ ಸೋಂಕಿತರು ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 193ಕ್ಕೆ ಏರಿಕೆಯಾಗಿದೆ.