ಕರ್ನಾಟಕ

karnataka

ETV Bharat / state

ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು : ಓರ್ವ ಸ್ಥಳದಲ್ಲೇ ಸಾವು - one died in car accident at muddebihal

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಸಂಜೆ ತನ್ನ ಸ್ನೇಹಿತರನ್ನು ಕರೆತರಲು ಹುನಗುಂದಗೆ ಹೋಗಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ತಂಗಡಗಿ ಗ್ರಾಮದಲ್ಲಿರುವ ಮನೆಯೊಂದಕ್ಕೆ ಇನ್ನೋವಾ ಕಾರು ನುಗ್ಗಿದೆ..

ಕಾರು ಅಪಘಾತ
ಕಾರು ಅಪಘಾತ

By

Published : Dec 14, 2020, 9:16 AM IST

ಮುದ್ದೇಬಿಹಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮನೆಗೆ ನುಗ್ಗಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ತಂಗಡಗಿಯಲ್ಲಿ ತಡರಾತ್ರಿ ನಡೆದಿದೆ.

ಗುತ್ತಿಗೆದಾರ ಮಾರುತಿ ಭೀಮಪ್ಪ ಹೊಸೂರ (34) ಎಂಬುವರು ಮೃತ ವ್ಯಕ್ತಿ. ಮುದ್ದೇಬಿಹಾಳ ನಿವಾಸಿಗಳಾದ ಚಂದ್ರು ನಿಡಗುಂದಿ, ಶಿವಾನಂದ ಮಡಿವಾಳರ, ಶಿವುಕುಮಾರ ಬಾಗೇವಾಡಿ, ಗುರುರಾಜ ಕಡಿ, ತಂಗಡಗಿಯ ಸಂಗಮೇಶ ಉಂಡಿ ಎಂಬುವರು ಗಾಯಗೊಂಡಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಸಂಜೆ ತನ್ನ ಸ್ನೇಹಿತರನ್ನು ಕರೆತರಲು ಮಾರುತಿ ಹುನಗುಂದಗೆ ಹೋಗಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ತಂಗಡಗಿ ಗ್ರಾಮದಲ್ಲಿರುವ ಮನೆಯೊಂದಕ್ಕೆ ಇನ್ನೋವಾ ಕಾರು ನುಗ್ಗಿದೆ. ಪರಿಣಾಮ ಚಾಲಕ ಸೇರಿದಂತೆ ಮನೆಯಲ್ಲಿದ್ದ ಎರಡು ಟಗರು ಮರಿಗಳು ಸಾವನ್ನಪ್ಪಿವೆ.

ಘಟನಾ ಸ್ಥಳಕ್ಕೆ ಪಿಎಸ್​ಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details