ವಿಜಯಪುರ: ಐತಿಹಾಸಿಕ ಗುಮ್ಮಟನಗರಿಯಲ್ಲಿ ಲೋಹದ ಹಕ್ಕಿ ಹಾರಲು ಕೊನೆಗೂ ಕಾಲ ಕೂಡಿ ಬಂದಿದೆ. 2021ರ ಅಗಸ್ಟ್‌ನಲ್ಲಿ ಮೊದಲ ಎಟಿಆರ್-72 ವಿಮಾನ ಹಾರಾಟ ನಡೆಸಲಿದೆ. ಈ ಮೂಲಕ ಜಿಲ್ಲೆಯ ದಶಕದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಕಾಮಗಾರಿ ಆರಂಭಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ದೊಡ್ಡ ಕಂಪನಿಗಳಿಗೆ ರಾಜ್ಯ ಸರ್ಕಾರ ಆಹ್ವಾನ ನೀಡಿದೆ.
ನನಸಾದ ಗುಮ್ಮಟನಗರಿ ಜನರ ದಶಕದ ಕನಸು.. ಅಗಸ್ಟ್‌ನಲ್ಲಿ ಹಾರಲಿದೆ ಲೋಹದ ಹಕ್ಕಿ
ಸ್ಥಳ ಪರಿಶೀಲನೆ ನಡೆಸಿದ ಗೋವಿಂದ ಕಾರಜೋಳ ರನ್ ವೇ, ನೆಲಸಮ ತಟ್ಟು ಸೇರಿ ವಿವಿಧ ಕಟ್ಟಡ ನಿರ್ಮಾಣ ಸ್ಥಳವನ್ನು ಪರಿಶೀಲಿಸಿದರು. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜತೆ ಕಾಮಗಾರಿಯ ನೀಲನಕ್ಷೆಯನ್ನು ವೀಕ್ಷಿಸಿದರು..
ವಿಮಾನ ನಿಲ್ದಾಣ ಕಾಮಗಾರಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತ ಹಿನ್ನೆಲೆ ಸ್ಥಳ ಪರಿಶೀಲನೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗಮಿಸಿದ್ದರು. ವಿಜಯಪುರ ತಾಲೂಕಿನ ಬುರಣಾಪುರ, ಮದಭಾವಿಯ 727 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯಲಿದೆ. ಸ್ಥಳ ಪರಿಶೀಲನೆ ನಡೆಸಿದ ಗೋವಿಂದ ಕಾರಜೋಳ ರನ್ ವೇ, ನೆಲಸಮ ತಟ್ಟು ಸೇರಿ ವಿವಿಧ ಕಟ್ಟಡ ನಿರ್ಮಾಣ ಸ್ಥಳವನ್ನು ಪರಿಶೀಲಿಸಿದರು. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜತೆ ಕಾಮಗಾರಿಯ ನೀಲನಕ್ಷೆಯನ್ನು ವೀಕ್ಷಿಸಿದರು. ತಕ್ಷಣ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸೂಚನೆ ನೀಡಿದರು.
ಮುಂದಿನ ವರ್ಷ ಅಗಸ್ಟ್‌ನಲ್ಲಿ ಮೊದಲು ಪ್ಯಾಸೆಂಜರ್ ಗ್ರೀನ್ ಫೀಲ್ಡ್ ದೇಶಿ ವಿಮಾನ ಹಾರಾಡಲಿದೆ. ವಿಮಾನ ನಿಲ್ದಾಣದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ರೈಟ್ಸ್ ಸಂಸ್ಥೆಗೆ ವಹಿಸಲಾಗಿದೆ. ಒಟ್ಟು 220 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.