ವಿಜಯಪುರ :ಅನಾರೋಗ್ಯದಿಂದ ಮೃತಪಟ್ಟ ಮಗನ ಸಾವಿನಿಂದ ತಾಯಿ ಮೃತಪಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ನಡೆದಿದೆ.
ಮೀರಸಾಬ್ ಮುಲ್ಲಾ (58), ಸೈಪನಮ್ಮಾ ಮುಲ್ಲಾ (80) ಸಾವಲ್ಲೂ ಒಂದಾದ ತಾಯಿ ಮಗ. ಅನಾರೋಗ್ಯದಿಂದಾಗಿ ಮಗ ಮೀರಸಾಬ್ ನಸುಕಿನ ಜಾವ ಮೃತಪಟ್ಟಿದ್ದರು. ಮಧ್ಯಾಹ್ನ ಅಂತ್ಯಕ್ರಿಯೆ ಸಹ ನಡೆದಿತ್ತು.