ವಿಜಯಪುರ: ಕಾರು ಚಾಲಕನ ಗಮನ ತಪ್ಪಿಸಿ 18 ಲಕ್ಷ ರೂ ಕಳ್ಳತನ ಮಾಡಿದ ಘಟನೆ ನಗರದಲ್ಲಿ ಹಾಡಹಗಲೇ ನಡೆದಿದೆ. ಕಾರಿನ ಬೋನಟ್ ಮೇಲೆ ಖದೀಮರು ಆಯಿಲ್ ಹಾಕಿ ಚಾಲಕನ ಗಮನ ಬೇರೆಡೆ ಸೆಳೆದು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ವಿಜಯಪುರ: ಚಾಲಕನ ಗಮನ ಬೇರೆಡೆ ಸೆಳೆದು 18 ಲಕ್ಷ ರೂ ಎಗರಿಸಿದ ಖದೀಮರು - ವ್ಯಾಪಾರಿ ಸಿದ್ದಾರಾಮ ಕಾಪ್ಸೆ
ಇಂಡಿ ತಾಲೂಕಿನ ಚಡಚಣ ಪಟ್ಟಣದಲ್ಲಿನ ಕರ್ನಾಟಕ ಬ್ಯಾಂಕ್ ಬಳಿ ಖದೀಮರು ಕಾರು ಚಾಲಕನ ಗಮನ ಬೇರೆಡೆ ಸೆಳೆದು ಹಣ ದೋಚಿದ್ದಾರೆ.
ಚಡಚಣ ಪಟ್ಟಣದಲ್ಲಿನ ಕರ್ನಾಟಕ ಬ್ಯಾಂಕ್
ಇಂಡಿ ತಾಲೂಕಿನ ಚಡಚಣ ತಾಲೂಕಿನ ಲೋಣಿ ಬಿ ಕೆ ಗ್ರಾಮದ ವ್ಯಾಪಾರಿ ಸಿದ್ದಾರಾಮ ಕಾಪ್ಸೆ ಹಣ ಕಳೆದುಕೊಂಡಿದ್ದಾರೆ. ಬೈಕ್‌ನಲ್ಲಿ ಬಂದಿದ್ದ ಮೂವರು ಚಡಚಣ ಪಟ್ಟಣದಲ್ಲಿನ ಕರ್ನಾಟಕ ಬ್ಯಾಂಕ್ ಬಳಿ ಕೃತ್ಯ ಎಸಗಿದ್ದಾರೆ. ಬ್ಯಾಂಕ್ನಿಂದ ಹಣ ಪಡೆದು ವ್ಯಾಪಾರಿ ಕಾರಿನಲ್ಲಿ ಬ್ಯಾಗ್ ಇಟ್ಟಿದ್ದರು. ಕಳ್ಳರು ಬ್ಯಾಗ್‌ಸಮೇತ 18 ಲಕ್ಷ ಹಣ ಹೊತ್ತೊಯ್ದಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕುಡಿದು ವಾಹನ ಚಾಲನೆ.. ಬೆಳಗಾವಿ ಚೆನ್ನಮ್ಮ ಪುತ್ಥಳಿಗೆ ಡಿಕ್ಕಿ ಹೊಡೆದ ಲಾರಿ