ವಿಜಯಪುರ:ಜಿಲ್ಲೆಯ ಬಸವನಬಾಗೇವಾಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿರುದ್ಧ ಹಣ ವಸೂಲಿ ಆರೋಪ ಕೇಳಿ ಬಂದಿದೆ.
ಬಸವನಬಾಗೇವಾಡಿ ಹೆಡ್ ಕಾನ್ಸ್ಟೇಬಲ್ ವಿರುದ್ಧ ಹಣ ವಸೂಲಿ ಆರೋಪ: ವಿಡಿಯೋ ವೈರಲ್ - money laundering Allegations
ಬಸವನಬಾಗೇವಾಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿರುದ್ಧ ಹಣ ವಸೂಲಿ ಆರೋಪ ಕೇಳಿ ಬಂದಿದ್ದು, ಹಣ ಸಂಗ್ರಹದ ವಿಡಿಯೋ ವೈರಲ್ ಆಗಿದೆ.
ಹೆಡ್ ಕಾನ್ಸ್ಟೇಬಲ್ ಎಚ್.ಎಸ್.ಹೊಸಮನಿ ಬಸವನಬಾಗೇಬಾಡಿ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಬೈಕ್ ಸವಾರರಿಗೆ ದಂಡ ವಿಧಿಸುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ದೃಶ್ಯವನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸ್ಥಳೀಯರು ವಿಚಾರಿಸಿದಾಗ ಪೊಲೀಸ್ ಠಾಣೆಗೆ ಸಿಸಿ ಕ್ಯಾಮರಾ ಖರೀದಿ ಮಾಡಲು ಹಣ ಸಂಗ್ರಹಿಸುವಂತೆ ಠಾಣೆಯ ಪಿಎಸ್ಐ ಸೂಚನೆ ನೀಡಿದ್ದರು. ಹೀಗಾಗಿ ದಂಡ ವಸೂಲಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಬೈಕ್ ಸವಾರರಿಂದ ತಲಾ 500 ರೂಪಾಯಿ ದಂಡ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕಾನ್ಸ್ಟೇಬಲ್ ಎಚ್.ಎಸ್.ಹೊಸಮನಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.