ಮುದ್ದೇಬಿಹಾಳ (ವಿಜಯಪುರ): ಕೊರೊನಾ ವೈರಸ್ ಹಾವಳಿ ಮಧ್ಯೆಯೂ ತಾಲೂಕಿನ ವಿವಿಧೆಡೆ ಮೊಹರಂ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ತಾಲೂಕಿನ ಚವನಬಾವಿ ಗ್ರಾಮದಲ್ಲಿ ಪಾಂಜಾಗಳ ಮೆರವಣಿಗೆ ವೇಳೆ ಸಾಂಪ್ರದಾಯಿಕವಾಗಿ ಯುವಕರು ಹೆಜ್ಜೆ ಕುಣಿತದಲ್ಲಿ ಸಂಭ್ರಮಿಸಿದ್ದಾರೆ.
ಕೊರೊನಾ ಸಂಕಷ್ಟದ ನಡುವೆ ಕೊನೆಗೊಂಡ ಸಂಭ್ರಮದ ಮೊಹರಂ - Moharram festival
ಜಿಲ್ಲೆಯಲ್ಲಿ ಪ್ರತಿವರ್ಷದಂತೆ ಮೊಹರಂ ಆಚರಣೆಗೆ ಸಂಭ್ರಮದಿಂದ ಏರ್ಪಡಿಸಲಾಗಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ನಿರೀಕ್ಷೆಯಂತೆ ಜನರ ಆಗಮನ ಕಡಿಮೆಯಾಗಿತ್ತು. ಅಲ್ಲದೆ ಮೆರವಣಿಗೆ ಸಹ ಸರಳವಾಗಿ ನೆರವೇರಿಸಲಾಯಿತು.
ತಾಲೂಕಿನ ಹಿರೇಮುರಾಳದಲ್ಲಿ ಪ್ರತಿವರ್ಷ ಕಂಡುಬರುತ್ತಿದ್ದ ಅದ್ದೂರಿ ಆಚರಣೆ ಈ ವರ್ಷ ಕಂಡುಬರಲಿಲ್ಲ. ಆದರೆ ಅಲಂಕೃತ ಡೋಲಿ, ಪಾಂಜಾಗಳನ್ನು ಮೆರವಣಿಗೆ ಅದ್ದೂರಿಯಾಗಿಯೇ ನೆರವೇರಿತು. ಈ ವೇಳೆ ಬೇರೆ ಬೇರೆ ಊರುಗಳಿಂದ ಆಗಮಿಸಿ ಡೋಲಿ, ಪಂಜಾಗಳ ಮೆರವಣಿಗೆ ನೋಡಲು ಕಿಕ್ಕಿರಿದು ಸೇರಿರುತ್ತಿದ್ದ ಗ್ರಾಮಸ್ಥರ ಸಂಖ್ಯೆ ಸಹ ಕಡಿಮೆಯಾಗಿತ್ತು.
ಅಲ್ಲದೆ ಮೆರವಣಿಗೆ, ನೃತ್ಯದ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಇದ್ದದ್ದು ಕಂಡುಬಂದಿತು. ಇನ್ನು ಕೋವಿಡ್ ಹಿನ್ನೆಲೆ ಅಬ್ಬರದ ಮೆರವಣಿಗೆ, ಪೂಜೆಗೆ ಕಡಿವಾಣ ಹಾಕಲಾಗಿತ್ತು, ಇದರಿಂದ ನಾಲತವಾಡ ಪಟ್ಟಣದಲ್ಲಿ ಅಲಾಯ್ ದೇವರುಗಳ ಮೆರವಣಿಗೆ ಸಹ ರದ್ದು ಮಾಡಲಾಗಿತ್ತು.