ವಿಜಯಪುರ:ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರನ್ನು ಬಿಜೆಪಿ ಶಾಸಕರು ತಮ್ಮ ಪಕ್ಷಕ್ಕೆ ಕರೆ ತರಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ವಿಚಾರಕ್ಕೆ ಶಾಸಕ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿ, ಜೆಡಿಎಸ್ ಪಕ್ಷವನ್ನು ಹಾಗೂ ದೇವೇಗೌಡರನ್ನು ಬಿಟ್ಟು ಹೋಗೊಲ್ಲ ಎಂದು ಎಂ.ಸಿ.ಮನಗೂಳಿಯವರೇ ಹೇಳಿದ್ದಾರಲ್ಲ ಎಂದರು.
ಬಿಟ್ಟು ಹೋಗಲ್ಲ ಅಂತಾ ಮನಗೂಳಿಯವರೇ ಹೇಳಿದ್ದಾರಲ್ಲ: ಶಿವಾನಂದ ಪಾಟೀಲ - ಎಂ.ಸಿ ಮನಗೂಳಿ
ನಾನು ಕೂಡ ಗೋಕಾಕ್ ಉಪ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸುತ್ತೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದ್ದಾರೆ.
ಶಾಸಕ ಶಿವಾನಂದ ಪಾಟೀಲ
ಹಾಗೆಯೇ ಇನ್ನೊಬ್ಬರ ಬಗ್ಗೆ ನನಗೆ ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಇನ್ನು ನಾನು ಕೂಡ ಗೋಕಾಕ್ ಉಪ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸುತ್ತೆ. ಉಳಿದ ಕ್ಷೇತ್ರದ ಗೆಲುವು ಫಲಿತಾಂಶ ಬಂದ ಮೇಲೆ ತಿಳಿಯಲಿದೆ ಎಂದರು.
ಇನ್ನು ಮಹಾರಾಷ್ಟ್ರ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ರಾತ್ರೋರಾತ್ರಿ ಮೈತ್ರಿ ಸರ್ಕಾರ ಮಾಡಿದ್ರು. ಅದು ತಪ್ಪು ಅಂತಾ ನಿರ್ಣಯವಾಗಿದೆ. ತಪ್ಪು ಅಂತಾ ಅವರೇ ಒಪ್ಪಿದ್ದಾರೆ ಎಂದು ಹೇಳಿದರು.