ವಿಜಯಪುರ:ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಯುವಕರ ಜೊತೆ ಕಬಡ್ಡಿ ಆಡಿದ್ದಾರೆ. ಅವರು ಕಬಡ್ಡಿ ಆಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ಈ ಮೂಲಕ ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ತಾವು ರಾಜಕೀಯಕ್ಕೂ ಬದ್ಧ, ಕಬಡ್ಡಿ ಆಡಲೂ ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ. ಸದ್ಯ ಶಾಸಕರ ಕಬಡ್ಡಿ ಆಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.