ವಿಜಯಪುರ: ಯಾರದ್ದೇ ಪೋನ್ ಟ್ಯಾಪ್ ಮಾಡಿದರೂ ಅದು ತಪ್ಪು. ಪೋನ್ ಟ್ಯಾಪಿಂಗ್ ಎಷ್ಟು ಸತ್ಯ, ಎಷ್ಟು ಸುಳ್ಳು ಅನ್ನೋದನ್ನ ಕಾದು ನೋಡಬೇಕಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಎಂ.ಬಿ.ಪಾಟೀಲ್, ಮಾಜಿ ಗೃಹ ಸಚಿವ ಸ್ವಾಮೀಜಿಗಳ ಪೋನ್ ಟ್ಯಾಪಿಂಗ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಯಾರದ್ದೇ ಪೋನ್ ಟ್ಯಾಪ್ ಮಾಡಿದರೂ ಅದು ತಪ್ಪು. ಸ್ವಾಮೀಜಿಗಳು ಹಿರಿಯರು ಅವರ ಫೋನ್ ಟ್ಯಾಪ್ ಮಾಡೋದು ಅಪರಾಧ. ಸ್ವಾಮೀಗಳು ಬಿಡಿ, ಜನ ಸಾಮಾನ್ಯರ ಫೋನ್ ಟ್ಯಾಪ್ ಮಾಡಿದರೂ ಅದು ಅಪರಾಧ ಎಂದಿದ್ದಾರೆ.
ರಾಮಕೃಷ್ಣ ಹೆಗಡೆ ಅಂತಹವರೇ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಪೋನ್ ಟ್ಯಾಪಿಂಗ್ ಎಷ್ಟು ಸತ್ಯ, ಎಷ್ಟು ಸುಳ್ಳು ಅನ್ನೋದನ್ನ ಕಾದು ನೋಡಬೇಕಿದೆ. ತನಿಖೆ ನಡೆಯುತ್ತದೆ ನೋಡೋಣ ಎಂದಿದ್ದಾರೆ.
ವಿನಯ ಪರ ಬ್ಯಾಟಿಂಗ್:
ಧಾರವಾಡ ಜಿ.ಪಂ. ಸದಸ್ಯ ಗಿರೀಶ ಗೌಡ ಹತ್ಯೆ ಪ್ರಕರಣ ಕುರಿತು ವಿನಯ ಕುಲಕರ್ಣಿ ಪರ ಬ್ಯಾಟ್ ಬೀಸಿದ್ದಾರೆ. ಯಾರು ತಪ್ಪು ಮಾಡಿದ್ದರು ಅದು ತಪ್ಪೆ. ಆದ್ರೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಹೆಸರು ಇಲ್ಲ. ಚಾರ್ಜ್ಶೀಟ್ನಲ್ಲೂ ವಿನಯ ಕುಲಕರ್ಣಿ ಹೆಸರಿಲ್ಲ. ಸುಮ್ಮನೆ ಮಾಧ್ಯಮದವರು ಅವರ ಹೆಸರು ಎಳೆದು ತರ್ತಿದ್ದೀರಿ ಎಂದಿದ್ದಾರೆ.