ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಅಭ್ಯರ್ಥಿ ನಾಜಿಯಾ ಅಂಗಡಿ ಹಾಗೂ ಅವರ ಅತ್ತೆ ಭಾಷಣ ಮಾಡುವಾಗ ಭಾವುಕರಾಗಿ ಕಣ್ಣೀರಿಟ್ಟು ಮತಯಾಚಿಸಿದ ಘಟನೆ ನಡೆಯಿತು.
ಸಿಂದಗಿ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಈ ಪ್ರಸಂಗ ಜರುಗಿತು. ಮಾಜಿ ಪ್ರಧಾನಿ ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಭಾಷಣ ಆರಂಭಿಸಿದ ಜೆಡಿಎಸ್ ಅಭ್ಯರ್ಥಿಯ ಅತ್ತೆ ನಸೀಮಾ ಅಂಗಡಿ ಅವರು ತಾವು ರಾಜಕೀಯ ಹಾಗೂ ವೈಯಕ್ತಿಕವಾಗಿ ಅನುಭವಿಸಿದ ನೋವು ಹಂಚಿಕೊಂಡು ಕಣ್ಣೀರಿಟ್ಟರು.
ಅತ್ತೆಯ ಭಾವುಕ ಕ್ಷಣ ನೋಡಿ ಅಭ್ಯರ್ಥಿ ನಾಜಿಯಾ ಅಂಗಡಿ ಅವರ ಕಣ್ಣಂಚಿನಲ್ಲಿ ಸಹ ನೀರು ಬಂತು. ನನ್ನ ಸೊಸೆಗೆ ಮತ ಹಾಕಿ ಗೆಲ್ಲಿಸಿ ಎಂದ ಅವರು, ನನ್ನ ಗಂಡ ಚುನಾವಣಾ ಪ್ರಚಾರಕ್ಕೆ ಹೋದಾಗ ಅಪಘಾತದಲ್ಲಿ ಸಾವೀಗೀಡಾಗಿದ್ದಾರೆ. ಈಗ ನನ್ನ ಸೊಸೆ ನಾಜಿಯಾ ಅಂಗಡಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ದಯವಿಟ್ಟು ನನ್ನ ಸೊಸೆಗೆ ಮತ ಕೊಟ್ಟು ಗೆಲ್ಲಿಸಿ ಎಂದು ಕೈ ಮುಗಿದು ಕಣ್ಣೀರಿಟ್ಟು ಬೇಡಿಕೊಂಡರು.
ಅಭ್ಯರ್ಥಿ ನಾಜಿಯಾ ಅಂಗಡಿ ಅವರು ಅತ್ತೆ ನಸೀಮಾ ಅಂಗಡಿ ಜೊತೆ ಕಣ್ಣೀರು ಹಾಕಿದರು. ಅತ್ತೆ-ಸೊಸೆಯ ಭಾವುಕ ಕ್ಷಣಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸಾಕ್ಷಿಯಾದರು.
ಓದಿ:ನಿಗಮ ಮಂಡಳಿ ಜೇನುಗೂಡಿಗೆ ಕೈಹಾಕಲು ಮುಂದಾದ ಸಿಎಂ: ಉಪ ಸಮರದ ನಂತರ ಮೇಜರ್ ಸರ್ಜರಿ!