ಮುದ್ದೇಬಿಹಾಳ: ಮುಷ್ಕರ ಬಿಟ್ಟು ಸೇವೆಗೆ ಹಾಜರಾಗುವ ನೌಕರರಿಗೆ ಸಾರಿಗೆ ಇಲಾಖೆ ಪ್ರೋತ್ಸಾಹಧನ ಘೋಷಿಸುವ ಮೂಲಕ ನೌಕರರನ್ನು ಸೇವೆಯತ್ತ ಸೆಳೆಯಲು ಹೊಸ ಪ್ಲಾನ್ ಮಾಡಿಕೊಂಡಿದೆ.
ಮುದ್ದೇಬಿಹಾಳ: ಮುಷ್ಕರ ಬಿಟ್ಟು ಸೇವೆಗೆ ಬಂದ ಸಾರಿಗೆ ನೌಕರರಿಗೆ ಪ್ರೋತ್ಸಾಹಧನ!
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಮುಷ್ಕರ ಬಿಟ್ಟು ಸೇವೆಗೆ ಹಾಜರಾಗುವ ನೌಕರರಿಗೆ ಸಾರಿಗೆ ಇಲಾಖೆ ಪ್ರೋತ್ಸಾಹಧನ ನೀಡುತ್ತಿದೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಕೆಎಸ್ಆರ್ಟಿಸಿ ಡಿಸಿ ನಾರಾಯಣಪ್ಪ ಕುರಬರ ಹೇಳಿದ್ದಾರೆ.
ಶ್ರೀಶೈಲ ಹಾಗೂ ಸ್ಥಳೀಯ ಮಾರ್ಗದಲ್ಲಿ ಸಂಚರಿಸಿ ಸೇವೆ ಒದಗಿಸಿದ ಚಾಲಕ, ನಿರ್ವಾಹಕರಿಗೆ ತಲಾ 200 ರೂ.ಗಳಂತೆ ಪ್ರೋತ್ಸಾಹಧನವನ್ನು ಸಾರಿಗೆ ಘಟಕ ವ್ಯವಸ್ಥಾಪಕರು ನೀಡಿದ್ದಾರೆ. ಇಂದು ವಿಜಯಪುರ ಎರಡು, ಮಂಗಳೂರು ಒಂದು, ಶ್ರೀಶೈಲ ಒಂದು, ನಾರಾಯಣಪುರ ಮಾರ್ಗದಲ್ಲಿ ಒಂದು ಬಸ್ ಸಂಚರಿಸಿದ್ದು, ಸೋಮವಾರ ಭಾಗಶಃ ನೌಕರರು ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಘಟಕ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.
ವಿಜಯಪುರದಲ್ಲಿ ಮುಷ್ಕರದ ಮಧ್ಯೆ ಕರ್ತವ್ಯ ನಿರ್ವಹಿಸಿದ ಕೆಎಸ್ಆರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಹಾಗೂ ನಿಗಮದ ಸಿಬ್ಬಂದಿಗೆ ಮಾರ್ಚ್ ತಿಂಗಳ ಸಂಬಳ ನಾಳೆ ನೀಡಲಾಗುವುದು ಎಂದು ಕೆಎಸ್ಆರ್ಟಿಸಿ ಡಿಸಿ ನಾರಾಯಣಪ್ಪ ಕುರಬರ ತಿಳಿಸಿದ್ದಾರೆ.