ಕರ್ನಾಟಕ

karnataka

ETV Bharat / state

ದೇಶದಲ್ಲಿ ಹಿಂದೂಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ ಆಗ್ರಹ

ರಾಜಕೀಯ ನಾಯಕರು ಹಿಂದೂಗಳನ್ನು ಕೇವಲ ವೋಟ್‌ಬ್ಯಾಂಕ್‌ನ ದೃಷ್ಟಿಯಿಂದ ನೋಡುತ್ತಿದ್ದು ಹಿಂದೂಗಳಿಂದ ಏನೇ ಸಣ್ಣ ತಪ್ಪಾದರೂ ಕೂಡ ಅದನ್ನು ಅತೀಯಾಗಿ ಬಿಂಬಿಸುವ ಕಾರ್ಯವಾಗುತ್ತಿದೆ. ಹಿಂದೂಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಉಡಪಿಯ ಪೇಜಾವರ ಶ್ರೀಗಳು ಹೇಳಿದ್ದಾರೆ.

pejawara-sri
ಪೇಜಾವರ ಶ್ರೀ

By

Published : Oct 23, 2021, 7:53 AM IST

ಮುದ್ದೇಬಿಹಾಳ (ವಿಜಯಪುರ): ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಅಷ್ಟೇ ಏಕೆ ನಮ್ಮ ದೇಶದಲ್ಲೂ ದೇವಾಲಯಗಳ ಧ್ವಂಸ ಕಾರ್ಯ ನಡೆದಿದೆ. ಇಂತಹದ್ದೇ ಒಂದು ವಿಚಾರ ಬೇರೆ ಮತಿಯರಲ್ಲಿ ಬಂದರೆ ಪ್ರಪಂಚವೇ ಹೊತ್ತಿ ಉರಿಯುತ್ತದೆ. ಸರ್ಕಾರಗಳು ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.

ಪಟ್ಟಣದ ರಾಘವೇಂದ್ರ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಹಿಂದೂಗಳು ಕಷ್ಟ ಸಹಿಷ್ಣುಗಳಾಗಿದ್ದು ಅವರಿಗೆ ರಕ್ಷಣೆ ನೀಡಬೇಕು. ಹಿಂದೂಗಳು ಬಹುಸಂಖ್ಯಾತರಾದ ಕಡೆಯೂ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಪಸಂಖ್ಯಾತರಾದ ಕಡೆಯೂ ತೊಂದರೆ ಎದುರಿಸುವಂತಾಗಿದೆ ಎಂದರು.

ದೇಶದಲ್ಲಿ ಹಿಂದೂಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ ಆಗ್ರಹ

ಹಿಂದೂಗಳ ರಕ್ಷಣೆಯ ಕೊರತೆ ಕಾಣುತ್ತಿದೆ. ರಾಜಕೀಯ ನಾಯಕರು ಹಿಂದೂಗಳನ್ನು ಕೇವಲ ವೋಟ್‌ಬ್ಯಾಂಕ್‌ನ ದೃಷ್ಟಿಯಿಂದ ನೋಡುತ್ತಿದ್ದು, ಹಿಂದೂಗಳಲ್ಲಿ ಏನೇ ಸಣ್ಣ ತಪ್ಪಾದರೂ ಕೂಡ ಅದನ್ನು ಅತೀಯಾಗಿ ಬಿಂಬಿಸುವ ಕಾರ್ಯವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಮತಾಂತರ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಬಲಾತ್ಕಾರದಿಂದಲೋ, ಹಣದ ಆಮಿಷ ನೀಡಿಯೋ ಮತಾಂತರ ಮಾಡುವುದು ಸರ್ವಥಾ ಸಲ್ಲದು. ಒಂದು ಮತೀಯರು ಮತಾಂತರ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಅದೇ ಹಿಂದೂಗಳು ಇಂತಹದ್ದೇ ಕಾರ್ಯಕ್ಕೆ ಇಳಿದರೆ ಸಮಾಜದಲ್ಲಿ ಯಾವ ಪರಿಸ್ಥಿತಿ ನಿರ್ಮಾಣ ಆದೀತು ಎಂದು ಊಹಿಸಲು ಕಷ್ಟ. ಇದನ್ನು ತಡೆಗಟ್ಟಲು ಸರ್ಕಾರ ಕಾನೂನುಗಳನ್ನು ಜಾರಿಗೆ ತಂದು ನಿಯಂತ್ರಣ ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಗೋಶಾಲೆಗಳಿಗೆ 5 ಲಕ್ಷ ರೂ.ದೇಣಿಗೆ

ಉಡುಪಿಯಲ್ಲಿ ಶ್ರೀಮಠದ ನೆರವಿನಡಿ ನಡೆಸುತ್ತಿರುವ ಗೋಶಾಲೆಗಳಿಗೆ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ 5 ಲಕ್ಷ ರೂ. ವೈಯಕ್ತಿಕ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ದೇಣಿಗೆ ಪಡೆದು ಮಾತನಾಡಿದ ಪೇಜಾವರ ಮಠದ ಶ್ರೀಗಳು, ಇಂತಹ ನಾಯಕರ ಅಗತ್ಯತೆ ನಿಮ್ಮ ಕ್ಷೇತ್ರಕ್ಕಿದೆ. ಮಠದಡಿ ಗೋಶಾಲೆ ನಡೆಸಲಾಗುತ್ತಿದೆ ಎಂದು ಹೇಳಿದ ಒಂದೇ ಮಾತಿಗೆ ಅವರು ತಕ್ಷಣ ವಾಗ್ದಾನ ನೀಡದೇ ತಾವೇ ಖುದ್ದಾಗಿ ಬಂದು ಗೋವುಗಳಿಗೆ ಆಸರೆಯಾಗಲಿ ಎಂದು 5 ಲಕ್ಷ ರೂ. ನೀಡಿರುವುದು ಅವರ ಹೃದಯ ಸಿರಿವಂತಿಕೆ ತೋರಿಸುತ್ತಿದೆ. ಭವಿಷ್ಯದಲ್ಲಿ ಅವರು ಇನ್ನು ಉನ್ನತ ಸ್ಥಾನಗಳನ್ನು ಅಲಂಕರಿಸಿ ಜನರ ಸೇವೆ ಸಲ್ಲಿಸಲು ಶ್ರೀಮಠದ ಆಶೀರ್ವಾದ ಸದಾ ಅವರ ಮೇಲಿರಲಿದೆ ಎಂದರು.

ಇದನ್ನೂ ಓದಿ:ಸಾಯಿಮಂದಿರಕ್ಕೆ ಬಡಿದ ಸಿಡಿಲು; ಗೋಡೆಗೆ ಹಾನಿ, ಸುಟ್ಟು ಕರಕಲಾದ ಪಾತ್ರೆಗಳು

ABOUT THE AUTHOR

...view details