ಕರ್ನಾಟಕ

karnataka

ETV Bharat / state

ವಿಜಯೋತ್ಸವ ಮುಗಿಸಿ ಬರುತ್ತಿದ್ದ ರೈತ ಟ್ರ್ಯಾಕ್ಟರ್ ಪಲ್ಟಿಯಾಗಿ ಸಾವು - ಗೊಳಸಂಗಿ ಗ್ರಾಮದ ರೈತ ಸಾವು

ರೈತ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿ ಗ್ರಾಮಕ್ಕೆ ತೆರಳುತ್ತಿದ್ದ ರೈತನೊರ್ವ ಟ್ರ್ಯಾಕ್ಟರ್​ ಪಲ್ಟಿಯಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುತ್ತಗಿ ಕ್ರಾಸ್​ ಬಳಿ ಜರುಗಿದೆ.

farmer-died-after-tractor-turnover-in-vijayapura
ರೈತ ಟ್ರಾಕ್ಟರ್ ಪಲ್ಟಿಯಾಗಿ ಸಾವು

By

Published : Dec 12, 2021, 1:09 PM IST

ವಿಜಯಪುರ : ಟ್ರ್ಯಾಕ್ಟರ್ ಪಲ್ಟಿಯಾಗಿ ರೈತನೊಬ್ಬ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-50ರ ಮುತ್ತಗಿ ಕ್ರಾಸ್ ಬಳಿ ನಡೆದಿದೆ. ಗೊಳಸಂಗಿ ಗ್ರಾಮದ ಗ್ಯಾನುಬಾ ವಿಠೋಬಾ ಸಾಳುಂಕೆ (48) ಮೃತ ರೈತ.

ಟ್ರ್ಯಾಕ್ಟ್​​ರ್​ ಪಲ್ಟಿ ರೈತ ಸಾವು : ರೈತ ಸಾಳುಂಕೆ ಬಸವನಬಾಗೇವಾಡಿಯಲ್ಲಿ ನಡೆದ ರೈತ ವಿಜಯೋತ್ಸವದಲ್ಲಿ ಭಾಗವಹಿಸಿ ಗೊಳಸಂಗಿ‌ ಗ್ರಾಮಕ್ಕೆ ಟ್ರ್ಯಾಕ್ಟರ್​​​ನಲ್ಲಿ ವಾಪಸಾಗುತ್ತಿದ್ದ. ಈ ವೇಳೆ ಮುತ್ತಗಿ‌ ಕ್ರಾಸ್ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್​​ ಪಲ್ಟಿಯಾಗಿದೆ. ಕೆಳಗೆ ಬಿದ್ದ ರೈತನ ಎದೆಯ ಮೇಲೆ ಟ್ರ್ಯಾಕ್ಟರ್​​​ನ ಬಿಡಿಭಾಗ ಬಿದ್ದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ರೈತ ಗ್ಯಾನಬಾ ಸಾಳುಂಕೆ ಸ್ವಂತ ಟ್ರ್ಯಾಕ್ಟರ್​​ ಇಟ್ಟುಕೊಂಡು ಸುತ್ತಮುತ್ತಲಿನ ಗ್ರಾಮದ ರೈತರ ಹೊಲದಲ್ಲಿ ನೇಗಿಲು, ಇನ್ನಿತರ ಕೆಲಸ ಮಾಡುತ್ತಿದ್ದನು. ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಸಿಪಿಐ ಸೋಮಶೇಖರ್ ಜುಟ್ಟಲ, ಕೂಡಗಿ ಪಿಎಸ್​ಐ ಡಿ.ಎಂ. ಸಂಗಾಪೂರ ಭೇಟಿ ಪರಿಶೀಲಿಸಿದರು. ಕೂಡಗಿ ಎನ್​ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details