ವಿಜಯಪುರ: ಆಕಾಶವಾಣಿ ಎ ಗ್ರೇಡ್ ಕಲಾವಿದೆ, ಖ್ಯಾತ ಗಾಯಕಿ ಶಶಿಕಲಾ ಶ್ರೀಕಾಂತ ಕುಲಹಳ್ಳಿ (58) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದ ಶಶಿಕಲಾ ಅವರು, ಕಿರಾಣಾ ಘರಾಣಾದಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ಕನ್ನಡ, ಮರಾಠಿ, ಹಿಂದಿ ಭಾಷೆಗಳಲ್ಲಿ ಸಾವಿರಾರು ಹಾಡು ಹಾಡಿದ್ದಾರೆ. ಹಿಂದೂಸ್ತಾನಿ, ಸುಗಮ ಸಂಗೀತ, ಭಾವಗೀತೆ, ಜಾನಪದ, ವಚನ, ಭಜನೆ, ಗಜಲ್, ಮರಾಠಿ ನಾಟ್ಯ ಸಂಗೀತದಲ್ಲೂ ಪರಿಣಿತಿ ಪಡೆದಿದ್ದರು.