ವಿಜಯಪುರ:ಜಿಲ್ಲೆಯಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ರಾಂಪೂರ ಲಾಡ್ಜ್ ಮೇಲೆ ವಿಧಾನ ಪರಿಷತ್ತಿನ ಸ್ಥಳೀಯ ಚುನಾವಣಾಧಿಕಾರಿಗಳು ಭಾನುವಾರ ರಾತ್ರಿ 10.45 ರ ಸುಮಾರಿಗೆ ದಾಳಿ ನಡೆಸಿದ್ದರು. ಈ ವೇಳೆ, ವಾಯವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಸೇರಿದ ಪ್ರಚಾರ ಸಾಮಗ್ರಿ ಮತ್ತು ಅಂದಾಜು 40 ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಮುದ್ದೇಬಿಹಾಳದಲ್ಲಿ ಚುನಾವಣೆ ಅಧಿಕಾರಿಗಳಿಂದ ದಾಳಿ: ನಗದು ವಶ! - ಮುದ್ದೇಬಿಹಾಳದಲ್ಲಿ ಹಣ ವಶ
ವಿಜಯಪುರದಲ್ಲಿ ಪರಿಷತ್ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಓದಿ:ಕಾಂಗ್ರೆಸ್ ಅಭ್ಯರ್ಥಿ ಹುಕ್ಕೇರಿ ವಿರುದ್ಧ ಹಣ ಹಂಚಿಕೆ ಆರೋಪ: ಕ್ರಮಕ್ಕೆ ಬಿಜೆಪಿ ಅಭ್ಯರ್ಥಿ ಆಗ್ರಹ
ಮತದಾರರಿಗೆ ಹಂಚಲು ಈ ಹಣ ತರಲಾಗಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿತ್ತು. ತಹಶೀಲ್ದಾರ್ ಬಿ.ಎಸ್.ಕಡಕಭಾವಿ, ಸಿಪಿಐ ಆನಂದ ವಾಘ್ಮೋಡಿ, ಪಿಎಸೈ ರೇಣುಜಾ ಜಕನೂರ, ಸೆಕ್ಟರ್ ಅಧಿಕಾರಿ ಆರ್ಎಫ್ಒ ಎಸ್.ಜಿ.ಸಂಗಾಲಿಕ, ಉಪ ಸೆಕ್ಟರ್ ಅಧಿಕಾರಿ ಆರ್ಎಫ್ಒ ರಾಜೀವ ಬಿರಾದಾರ, ಪುರಸಭೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಸೆಕ್ಟರ್ ಅಧಿಕಾರಿಯವರು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.