ವಿಜಯಪುರ :ಗಣನೀಯವಾಗಿ ಏರುತ್ತಿರುವ ಕೊರೊನಾ ಸಾವಿನ ಪ್ರಕರಣಗಳನ್ನು ನಿಯಂತ್ರಿಸಲು ಹೊಸ ಯೋಜನೆ ರೂಪಿಸಿ ದಿಟ್ಟ ಹೆಜ್ಜೆ ಇಟ್ಟಿರುವ ಜಿಲ್ಲಾಡಳಿತ, ಸೂಕ್ಷ್ಮ ಪ್ರದೇಶಗಳ ಜನರಿಗೆ ಹೆಚ್ಚು ಸ್ವ್ಯಾಬ್ ಟೆಸ್ಟ್ ಮಾಡಲು ಮುಂದಾಗಿದೆ.
ಜಿಲ್ಲೆಯಲ್ಲಿ ಈವರೆಗೆ 39 ಸಾವಿರಕ್ಕಿಂತ ಹೆಚ್ಚು ಜನರನ್ನು ಸ್ವ್ಯಾಬ್ ಟೆಸ್ಟ್ಗೆ ಒಳಪಡಿಸಿಲಾಗಿದೆ. ಅದರಲ್ಲಿ 16 ಸಾವಿರಕ್ಕಿಂತ ಹೆಚ್ಚು ಪರೀಕ್ಷೆಗಳು ಕಂಟೇನ್ಮೆಂಟ್ ಪ್ರದೇಶ ಹಾಗೂ ಜನಸಾಂದ್ರತೆ ಪ್ರದೇಶದಲ್ಲಿ ಜಿಲ್ಲಾಡಳಿತ ನಡೆಸಿದೆ. ಈ ಮೊದಲು ನಿತ್ಯ 400-500 ಸ್ವ್ಯಾಬ್ ಪರೀಕ್ಷೆ ಮಾಡುತ್ತಿತ್ತು.
ಅದರಿಂದಾಗಿ ತಡವಾಗಿ ವರದಿ ಕೈಸೇರುವ ಪರಿಣಾಮ, ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಆಗುತ್ತಿರಲಿಲ್ಲ. ನೆಗಡಿ, ಜ್ವರ, ಕೆಮ್ಮು ಬಂದರೆ ಅವರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿ ನಂತರ ವರದಿ ಬರುವವರೆಗೆ ರೋಗಿ ನಿರ್ಭಯವಾಗಿ ಓಡಾಡುತ್ತಿದ್ದ. ಒಂದು ವೇಳೆ ಆತನಿಗೆ ಕೊರೊನಾ ಸೋಂಕು ತಗುಲಿದ್ದರೆ, ಆತನ ಸಂಪರ್ಕಕ್ಕೆ ಬಂದವರಿಗೂ ಸೋಂಕು ಅಂಟುತಿತ್ತು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಬಳಿಕ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ಸಂಗ್ರಹಿಸಬೇಕಾಗಿತ್ತು. ಆಗ ವರದಿ ಬರುವವರೆಗೂ ಅವರು ಕಾಯಬೇಕಾಗಿತ್ತು. ಒಂದು ವೇಳೆ ಕೊರೊನಾ ಖಚಿತವಾದ್ರೆ ಅವರಿಗೆ ಆರಂಭದ ಚಿಕಿತ್ಸೆ ಸಿಗುವುದಿಲ್ಲ. ಅಷ್ಟರೊಳಗೆ ಆತ ಸಾವಿನ ಹತ್ತಿರದಲ್ಲಿ ಇರುತ್ತಿದ್ದ. ಹೀಗಾಗಿ, ಸಾವಿನ ಪ್ರಮಾಣ ಹೆಚ್ಚಾಗಿದೆ. ಇದನ್ನು ತಪ್ಪಿಸಲು ಜಿಲ್ಲಾಡಳಿತ ಅತಿ ಹೆಚ್ಚು ಗಂಟಲು ದ್ರವ ಸಂಗ್ರಹಿಸುತ್ತಿದೆ. ಹೆಚ್ಚು ಪರೀಕ್ಷೆ ನಡೆಸಿದಂತೆ ರೋಗವನ್ನೂ ಬೇಗನೇ ಪತ್ತೆ ಹಚ್ಚಬಹುದು.
ಈಗ ನಿತ್ಯ 1200-1300 ಪರೀಕ್ಷೆ ನಡೆಸುತ್ತಿದ್ದು, ಕೇವಲ ವಾರದಲ್ಲಿ 8 ಸಾವಿರ ಟೆಸ್ಟ್ ಮಾಡಿದೆ. ಇನ್ನೊಂದು ಒಂದು ಹೆಜ್ಜೆ ಮುಂದೆ ಹೋಗಿರುವ ಜಿಲ್ಲಾಡಳಿತ, ಪಾಸಿಟಿವ್ ಪ್ರಕರಣ ಹೆಚ್ಚಾಗಿ ದಾಖಲಾಗುತ್ತಿರುವ ಕಂಟೇನ್ಮೆಂಟ್ ಪ್ರದೇಶಗಳು, ಸೂಕ್ಷ್ಮ ಮತ್ತು ಜನಸಾಂದ್ರತೆ ಪ್ರದೇಶದಲ್ಲಿ ಹೆಚ್ಚು ಸ್ವ್ಯಾಬ್ ಟೆಸ್ಟ್ ಮಾಡುವ ಗುರಿಯನ್ನು ಇಟ್ಡುಕೊಂಡಿದೆ.