ಕರ್ನಾಟಕ

karnataka

ETV Bharat / state

ಹಣ್ಣು ಮತ್ತು ತರಕಾರಿ ಬೆಳೆಗಳ ಪರಿಹಾರ ಧನ ಕುರಿತು ವಿಜಯಪುರದಲ್ಲಿ ಡಿಸಿ ಸಭೆ.. - ವಿಜಯಪುರ ಲೆಟೆಸ್ಟ್ ನ್ಯೂಸ್

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು 2020-21ನೇ ಸಾಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರಧನ ವಿತರಿಸುವ ಕುರಿತು ಜಿಲ್ಲಾಮಟ್ಟದ ಸಮಿತಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಡಿಸಿ ಮಾತನಾಡಿ, ಹಿಂಗಾರಿನಲ್ಲಿ ಕೈಗೊಳ್ಳಲಾದ ತೋಟಗಾರಿಕಾ ಬೆಳೆ ಸಮೀಕ್ಷೆಯಲ್ಲಿ ಕಲ್ಲಂಗಡಿ ಮತ್ತು ಕರಬೂಜ್‍ಗೆ ಸಂಬಂಧಿಸಿದಂತೆ ಹೆಸರು ಬಿಟ್ಟು ಹೋಗಿದಲ್ಲಿ ಜೂ.15ರೊಳಗೆ ಹೆಸರು ಸಲ್ಲಿಸುವಂತೆ ತಿಳಿಸಿದರು.

DC meeting
DC meeting

By

Published : Jun 5, 2020, 10:21 PM IST

ವಿಜಯಪುರ: ಹಿಂಗಾರಿನಲ್ಲಿ ಕೈಗೊಳ್ಳಲಾದ ತೋಟಗಾರಿಕಾ ಬೆಳೆ ಸಮೀಕ್ಷೆಯಲ್ಲಿ ಕಲ್ಲಂಗಡಿ ಮತ್ತು ಕರಬೂಜ್‍ಗೆ ಸಂಬಂಧಿಸಿದಂತೆ ಹೆಸರು ಬಿಟ್ಟು ಹೋಗಿದ್ರೇ, ಅಂತಹವರು ಜೂನ್‌ 15ರೊಳಗೆ ಆಯಾ ತಾಲೂಕು ತೋಟಗಾರಿಕೆ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು 2020-21ನೇ ಸಾಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರಧನ ವಿತರಿಸುವ ಕುರಿತು ಜಿಲ್ಲಾಮಟ್ಟದ ಸಮಿತಿ ಸಭೆ ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಸಿ, ಈಗಾಗಲೇ ತೋಟಗಾರಿಕೆ ಬೆಳೆಗಳಾದ ನಿಗದಿತ ಹಣ್ಣು ಮತ್ತು ತರಕಾರಿಗಳಿಗೆ ಸರ್ಕಾರವು 15 ಸಾವಿರ ರೂ.ಗಳ ಸಹಾಯಧನ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಹಿಂಗಾರಿನಲ್ಲಿ ಕೈಗೊಳ್ಳಲಾದ ಬೆಳೆ ಸಮೀಕ್ಷೆಯಿಂದ ಕಲ್ಲಂಗಡಿ ಮತ್ತು ಕರಬೂಜ್‍ಗೆ ಸಂಬಂಧಿಸಿದಂತೆ ಸಮೀಕ್ಷೆಯಿಂದ ಹೆಸರು ಕೈಬಿಟ್ಟು ಹೋಗಿದ್ದಲ್ಲಿ ತಕ್ಷಣ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಯಾವುದೇ ರೀತಿಯ ದಾಖಲಾತಿ ಸಲ್ಲಿಸುವ ಅವಶ್ಯಕತೆ ಕೂಡಾ ಇರುವುದಿಲ್ಲ ಎಂದು ಅವರು ತಿಳಿಸಿದರು.

ಈಗಾಗಲೇ ಕೈಗೊಂಡ ಬೆಳೆ ಸಮೀಕ್ಷೆಗೆ ಸಂಬಂಧಪಟ್ಟಂತೆ ಹಣ್ಣುಗಳಾದ ಬಾಳೆ, ಪಪ್ಪಾಯಿ, ಅಂಜೂರ, ಅನಾನಸ್, ಕಲ್ಲಂಗಡಿ ಮತ್ತು ಕರಬೂಜ್‍ಗಳಿಗೆ ಸರ್ಕಾರ ಬೆಳೆಹಾನಿ ಪರಿಹಾರ ಘೋಷಿಸಿದೆ. ಅದರಂತೆ ತರಕಾರಿ ಬೆಳೆಗಳಾದ ಸಿಹಿಕುಂಬಳ, ಎಲೆಕೋಸು, ದಪ್ಪುಮೆಣಸಿನಕಾಯಿ, ಹೂಕೋಸು, ಹಸಿರು ಮೆಣಸಿನಕಾಯಿ, ಟೊಮ್ಯಾಟೊ, ಈರುಳ್ಳಿ ಹಾಗೂ ಕ್ಯಾರೆಟ್ ತರಕಾರಿ ಬೆಳೆಗಾರರಿಗೆ ಪರಿಹಾರಧನ ಕಾರ್ಯಕ್ರಮದಡಿಯಲ್ಲಿ ಸರ್ಕಾರ ಪರಿಹಾರ ಧನ ನೀಡಲಿದೆ. ಸದ್ಯ ಸಮೀಕ್ಷೆಯನ್ವಯ 285.67 ಹೆಕ್ಟೇರ್ ತರಕಾರಿ ಬೆಳೆ ಮತ್ತು 910.54 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಣ್ಣು ಬೆಳೆಗಳಿದ್ದು, ಅರ್ಹರಿಗೆ ಪರಿಹಾರ ಧನ ದೊರೆಯಲಿದೆ ಎಂದರು.

ಇನ್ನೂ ಈರುಳ್ಳಿ ಮತ್ತು ಇತರೆ ಬೆಳೆಗಳ ಸಮೀಕ್ಷೆ ಈಗಾಗಲೇ ಕೈಗೊಂಡಿದ್ದು, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ದೊರೆಯಲು ಸಮೀಕ್ಷಾ ವರದಿಯನ್ನು ಮರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆಯಾ ಗ್ರಾಮ.ಪಂಚಾಯತಿವಾರು ಬೆಳೆ ಸಮೀಕ್ಷಾ ವರದಿಯನ್ನು ಪ್ರಕಟಿಸಿದ್ದು, ಈ ಕುರಿತಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಆಯಾ ತಾಲೂಕು ತೋಟಗಾರಿಕೆ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಭೇಟಿ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ತೋಟಗಾರಿಕಾ ಬೆಳೆ ಸಮೀಕ್ಷೆಯಲ್ಲಿ ಹೆಸರುಗಳು ಬಿಟ್ಟು ಹೋದಲ್ಲಿ, ವಿಜಯಪುರ ತಾಲೂಕು ತೋಟಗಾರಿಕೆ ಅಧಿಕಾರಿ ಶಾಲಿನಿ ಎಸ್. ಮೊ.ಸಂ: 9535185999, ಇಂಡಿ ತಾಲೂಕಿನ ಆರ್.ಡಿ ಹಿರೇಮಠ ಮೊ.ಸಂ: 8123194479, ಸಿಂದಗಿ ತಾಲೂಕಿನ ಅಧಿಕಾರಿ ಅಮೋಘ ಹಿರೆಕುರುಬರ ಮೊ.ಸಂ: 8971766033, ಬ.ಬಾಗೇವಾಡಿ ಅಧಿಕಾರಿ ಸಿ.ಬಿ ಪಾಟೀಲ ಮೊ.ಸಂ: 9845215362, ಮುದ್ದೇಬಿಹಾಳ ಅಧಿಕಾರಿ ಸುಭಾಸ ಟಾಕಳೆ ಮೊ.ಸಂ: 9972719844 ಇವರಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು. ಸಭೆಯಲ್ಲಿ ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details