ವಿಜಯಪುರ: ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಗುತ್ತಿಗೆದಾರನೊಬ್ಬ ತನ್ನ ಸ್ನೇಹಿತರಿಗೆ ನಿನ್ನೆ ತಡರಾತ್ರಿ ಗುಂಡು - ತುಂಡಿನ ಪಾರ್ಟಿ ಮಾಡಿ ಸರ್ಕಾರಿ ಬಂಗಲೆಯನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ.
ಗುತ್ತಿಗೆದಾರನೊಬ್ಬ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡದಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ತನ್ನ ಸ್ನೇಹಿತರಿಗೆ ಹಾಗೂ ಸಹದ್ಯೋಗಿಗಳಗೆ ಗುಂಡು-ತುಂಡಿನ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಸುಮಾರು 200ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎನ್ನಲಾಗುತ್ತಿದೆ. ಈ ಕುರಿತಾದ ವಿಡಿಯೋ-ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.