ವಿಜಯಪುರ: ತೋಟದ ಬಾವಿಯ ಮೋಟಾರ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿ ಸಹೋದರರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ನಡೆದಿದೆ. ಮುದ್ದುಗೌಡ ಅಪ್ಪಾ ಸಾಹೇಬ್ ಪಾಟೀಲ(22) ಹಾಗೂ ಶಿವರಾಜ್ ಅಪ್ಪಾ ಸಾಹೇಬ್ ಪಾಟೀಲ (18) ಎಂಬುವರು ಮೃತಪಟ್ಟಿರುವ ಸಹೋದರರು. ಅಣ್ಣ-ತಮ್ಮ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ವಿಜಯಪುರ : ವಿದ್ಯುತ್ ಸ್ಪರ್ಶಿಸಿ ಸಹೋದರರ ಸಾವು - brothers died by current shock
ವಿದ್ಯುತ್ ಸ್ಪರ್ಶಿಸಿ ಅಣ್ಣ ತಮ್ಮ ಸಾವನ್ನಪ್ಪಿರುವ ಘಟನೆ ಭತಗುಣಕಿ ಗ್ರಾಮದಲ್ಲಿ ನಡೆದಿದೆ..
ವಿದ್ಯುತ್ ಸ್ಪರ್ಶಿಸಿ ಸಹೋದರರ ಸಾವು
ಇದನ್ನೂ ಓದಿ:ಪರೀಕ್ಷೆಯಲ್ಲಿ ಹೆಚ್ಚಿನ ಅಂಕದ ಆಮಿಷ: ವಿದ್ಯಾರ್ಥಿನಿ ಜೊತೆ ಶಿಕ್ಷಕನ ಅನುಚಿತ ವರ್ತನೆ
ಅಣ್ಣ ಮುದ್ದುಗೌಡ ಮೋಟಾರ್ ಆನ್ ಮಾಡಲು ಹೋದಾಗ ವಿದ್ಯುತ್ ಸ್ಪರ್ಶಿಸಿದೆ. ಇದನ್ನು ಬಿಡಿಸಲು ಹೋದ ತಮ್ಮ ಶಿವರಾಜ್‌ಗೂ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.