ವಿಜಯಪುರ:ನಗರದಲ್ಲಿ ಖ್ಯಾತ ವೈದ್ಯನಿಗೆ ಬ್ಲಾಕ್ಮೇಲ್ ಮಾಡಿದ ಆರೋಪದ ಮೇಲೆ ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಸೇರಿ ನಾಲ್ವರಿಗೆ ಪೊಲೀಸರು ಕೈಕೋಳ ತೊಡಿಸಿದ್ದಾರೆ.
ಖಾಸಗಿ ವಾಹಿನಿಯ ಜಿಲ್ಲಾ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮರಾಮನ್ ಸಂಗಮೇಶ್ ಕುಂಬಾರ, ಟ್ಯಾಬ್ಲೈಡ್ ಪತ್ರಿಕೆ ವರದಿಗಾರರಾದ ರವಿ ಬಿಸ್ನಾಳ್ ಹಾಗೂ ಬಸವರಾಜ್ ಅವರನ್ನು ಬಂಧಿಸಲಾಗಿದೆ.
ಅಕ್ರಮ ಲಿಂಗ ಪತ್ತೆ ಮಾಡುತ್ತೀರಿ ಅದನ್ನು ಪ್ರಸಾರ ಮಾಡುತ್ತೇನೆ ಎಂದು ಹೆದರಿಸಿ 15 ಲಕ್ಷ ಹಣದ ಬೇಡಿಕೆ ಇಟ್ಟಿದ್ದರು. ಕೊನೆಗೆ 10 ಲಕ್ಷಕ್ಕೆ ಒಪ್ಪಿ, ವೈದ್ಯನಿಂದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಕುರಿತು ಎಸ್ಪಿ ಸುದ್ದಿಗೋಷ್ಟಿ ಡಾ. ಕಿರಣ್ ಓಸ್ವಾಲ್ ಎಂಬ ವೈದ್ಯರಿಂದ ಹಣ ಪಡೆಯುವಾಗ ಬಂಧನಕ್ಕೆ ಒಳಗಾಗಿದ್ದಾರೆ. ಪತ್ರಕರ್ತರ ಬೆದರಿಕೆ ಹಾಗೂ ಹಣದ ಬೇಡಿಕೆ ಕುರಿತು ವೈದ್ಯ ಓಸ್ವಾಲ್ ದೂರು ನೀಡಿದ್ದರು. ವಿಜಯಪುರ ನಗರದ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.