ವಿಜಯಪುರ: ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪೇ ಸಿಎಂ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಆರೋಪಿಸಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ. ಅವರು ಪೇಮೆಂಟ್ ಮಾಡಿ ಸಿಎಂ ಆಗಿದ್ದಾರೆ. ಮೇಡಂ (ಸೋನಿಯಾ ಗಾಂಧಿ)ಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸಿಎಂ ಆಗಿರೋದು ಎಲ್ಲರಿಗೂ ಗೊತ್ತಿದೆ. ಖರ್ಗೆ, ಪರಮೇಶ್ವರ್ ಸಿನಿಯರ್, ಡಿಕೆಶಿ, ದೇಶಪಾಂಡೆಯಂತಹ ಲೀಡರ್ ನಡುವೆ ಸಿಎಂ ಆಗಿದ್ದು, ಪೇಮೆಂಟ್ ಮಾಡಿಯೇ ತಾನೇ ಎಂದರು.
ಮೇಡಂಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸೀಟ್ ಉಳಿಸಿಕೊಂಡಿದ್ದು, ಪೇ ಮಾಡಿಯೇ ಮೇಡಂರನ್ನು ಸಿದ್ದರಾಮಯ್ಯ ಸಂತೋಷ ಪಡೆಸಿದ್ದಾರೆ. PAYCM ಅಲ್ಲಿ ಎರಡು ಅರ್ಥ ಇದೆ. ಒಂದು ಪೇ ಸಿಎಂ ಸಿದ್ದರಾಮಯ್ಯ, ಇನ್ನೊಂದು ಪೇ ಕಾಂಗ್ರೆಸ್ ಮೇಡಂ, ಪೇಮೆಂಡ್ ಮಾಡಿದ ಸಿಎಂ ಪೇ ಸಿಎಂ. ಪೇಮೆಂಟ್ ಪಡೆದ ಮೇಡಂ ಪೇ ಕಾಂಗ್ರೆಸ್ ಮೇಡಂ ಎಂದು ವ್ಯಂಗ್ಯ ಮಾಡಿದರು.