ಕರ್ನಾಟಕ

karnataka

ETV Bharat / state

ಜಿಲ್ಲೆಗೆ ಸಚಿವ ಸ್ಥಾನ ಕೊಡದಿದ್ದರೆ ಮುಂದಿನ ಚುನಾವಣೆಯಲ್ಲಿ ಬೇರೇನೇ ಪರಿಣಾಮ ಬೀರಲಿದೆ: ಶಾಸಕ ಯತ್ನಾಳ್​ - BJP Election campaign in Alamela

ಆಲಮೇಲದಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಎಲ್ಲರೂ ಸೇರಿ ರಮೇಶ ಭೂಸನೂರ ಅವರನ್ನು ಸೇರಿ ಗೆಲ್ಲಿಸುತ್ತೇವೆ. ಸಾಮೂಹಿಕ ನಾಯಕತ್ವಕ್ಕೆ ಕ್ರೆಡಿಟ್ ಕೊಡಬೇಕು. ಸಿದ್ದರಾಮಯ್ಯ, ಡಿಕೆಶಿ, ಅರೆಹುಚ್ಚರು. ರಾಹುಲ್ ಗಾಂಧಿ ಅಫೀಮ್ ಸೇವನೆ ಮಾಡಿಕೊಂಡು ಅಡ್ಡಾಡುತ್ತಾರೆ. ಅವರ ಕೈಯಲ್ಲಿ ದೇಶ ಕೊಟ್ಟರೆ ಗತಿ ಏನು? ಎಂದು ಹೇಳಿದ್ದಾರೆ.

ಶಾಸಕ ಯತ್ನಾಳ್​
ಶಾಸಕ ಯತ್ನಾಳ್​

By

Published : Oct 19, 2021, 9:01 PM IST

Updated : Oct 19, 2021, 9:16 PM IST

ವಿಜಯಪುರ:ಜಿಲ್ಲೆಗೆ ಸಚಿವ ಸ್ಥಾನ ಕೊಡಿ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಬೇರೆನೇ ಪರಿಣಾಮ ಬೀರಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿಎಂಗೆ ಚುನಾವಣೆ ಪ್ರಚಾರದ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಆಲಮೇಲದಲ್ಲಿ ನಡೆದ ಪ್ರಚಾರ ಸಭೆ:

ಆಲಮೇಲದಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಎಲ್ಲರೂ ಸೇರಿ ರಮೇಶ ಭೂಸನೂರ ಅವರನ್ನು ಸೇರಿ ಗೆಲ್ಲಿಸುತ್ತೇವೆ. ಸಾಮೂಹಿಕ ನಾಯಕತ್ವಕ್ಕೆ ಕ್ರೆಡಿಟ್ ಕೊಡಬೇಕು. ಅದರ ಬದಲು ಯಾರೊಬ್ಬರನ್ನು ಮೆರೆಸಿದರೆ ಸುಮ್ಮನಿರಲ್ಲ ಎಂದು ಹೇಳಿದ್ದಾರೆ.

ಶಾಸಕ ಯತ್ನಾಳ್​

ಸೋಮಣ್ಣ ಪರ ಯತ್ನಾಳ್ ಬ್ಯಾಟಿಂಗ್:

ಸಿಂದಗಿಯಲ್ಲಿ ಭೂಸನೂರು ಗೆಲುವಿಗೆ ಸೋಮಣ್ಣ ಸಾಕಷ್ಟು ಶ್ರಮಿಸುತ್ತಿದ್ದಾರೆ. ಹಿಂದೆ ಸೋಮಣ್ಣ ಹಾಗೂ ನನ್ನ ನಡುವೆ ವೈಮಸ್ಸಿತ್ತು. ಕೆಲವರು ಈಗಲೂ ಅದೇ ವಿಡಿಯೋ ಹರಿಬಿಡುತ್ತಾರೆ. ಸೋಮಣ್ಣ ಬಹಳ ಒಳ್ಳೆಯವರು. ಚುನಾವಣೆ ನಂತರ ಸೋಮಣ್ಣಗೆ ಬೆಂಗಳೂರು ಉಸ್ತುವಾರಿ ಕೊಡಬೇಕು. ಸುಮ್ಮನೆ ನಿಮ್ಮ ಜತೆ ಓಡಾಡುವರಿಗೆ ಕೊಡಬೇಡಿ ಎಂದು ಸೋಮಣ್ಣ ಪರ ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ:

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಅವರ ಬಗ್ಗೆ ನನಗೂ ಎಲ್ಲ ಗೊತ್ತಿದೆ. ಅವರ ವಿಚಾರಗಳನ್ನು ನಾನು ಮಾತನಾಡಲು ಹೋಗುವುದಿಲ್ಲ. ಕಾಂಗ್ರೆಸ್ ಅವರು ಬರಿ ಪೆಟ್ರೋಲ್, ಡೀಸೆಲ್ ಬಗ್ಗೆಯೇ ಶಂಖ ಹೊಡೆಯುತ್ತಾರೆ. ಮೋದಿಯವರ ಸಾಧನೆ ಜನತೆಗೆ ಗೊತ್ತಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅಫೀಮ್ ಸೇವನೆ ಮಾಡಿಕೊಂಡು ಅಡ್ಡಾಡುತ್ತಾರೆ:

ಸಿದ್ದರಾಮಯ್ಯ, ಡಿಕೆಶಿ, ಅರೆಹುಚ್ಚರು. ರಾಹುಲ್ ಗಾಂಧಿ ಅಫೀಮ್ ಸೇವನೆ ಮಾಡಿಕೊಂಡು ಅಡ್ಡಾಡುತ್ತಾರೆ. ಅವರ ಕೈಯಲ್ಲಿ ದೇಶ ಕೊಟ್ಟರೆ ಗತಿ ಏನು?. ಸಿದ್ದರಾಮಯ್ಯ ನಾಟಕ ಕಂಪನಿ ಇನ್ನು ನಡೆಯಲ್ಲ. ಸಾಮೂಹಿಕ ನಾಯಕತ್ವದಲ್ಲಿ ಗೆದ್ದು ತೋರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

Last Updated : Oct 19, 2021, 9:16 PM IST

ABOUT THE AUTHOR

...view details