ವಿಜಯಪುರ:ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಮೇಲಿದ್ದ ಮೂವರು ಸವಾರರು ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಜಯಪುರದಲ್ಲಿ ಮರಕ್ಕೆ ಬೈಕ್ ಡಿಕ್ಕಿ: ಮೂವರ ದುರ್ಮರಣ - ವಿಜಯಪುರ ಅಪಘಾತ
ವಿಧಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಈ ಮೂವರ ಮೇಲೆ ಮುನಿಸಿಕೊಂಡಂತಿದೆ. ತ್ರಿಬ್ಬಲ್ ರೈಡಿಂಗ್ ಮಾಡುತ್ತಿದ್ದ ಬೈಕ್ ಮರಕ್ಕೆ ಡಿಕ್ಕಿ ಹೊಡೆದು, ಮೂವರೂ ಸವಾರರು ಸಾವನ್ನಪ್ಪಿರುವ ಘಟನೆ ವಿಜಯಪುರ ಸಮೀಪ ನಡೆದಿದೆ.
ಮೂವರು ಸವಾರರು ಸಾ
ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಕುರಗಟಕಿ ಬಳಿ ಘಟನೆ ನಡೆದಿದ್ದು, ಕುರಗಟಕಿ ನಿವಾಸಿಗಳಾದ ಮಹೇಶ ನರೂಟೆ(22), ಅಂಬಣ್ಣಾ ಹನಮಾನೆ(25) ಹಾಗೂ ಲೋಣಿ ಗ್ರಾಮದ ರಾಜಕುಮಾರ ಪೂಜಾರಿ(20) ಎಂಬುವರು ಮೃತಪಟ್ಟಿದ್ದಾರೆ.
ಟಾಕಳಿಯಿಂದ ಕುರಗಟಕಿಗೆ ಹೋಗುವಾಗ ಘಟನೆ ನಡೆದಿದ್ದು, ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ತಾಲೂಕಿನ ಮಂದ್ರೂಪ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.