ವಿಜಯಪುರ:ಬೈಕ್ ಅಪಘಾತವಾಗಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ದೇವರ ಹಿಪ್ಪರಗಿಯ ಪಟ್ಟಣದ ಕಾಲುವೆಯ ಹತ್ತಿರದ ಶಾಂಭವಿ ಡಾಬಾ ಬಳಿ ನಡೆದಿದೆ.
ವಿಜಯಪುರ: ಬೈಕ್ ಅಪಘಾತಕ್ಕೆ ಯುವಕ ಬಲಿ - ಬೈಕ್ ಅಪಘಾತ ಸುದ್ದಿ
ಬೈಕ್ ಅಪಘಾತ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹಿಪ್ಪರಗಿಯ ಶಾಂಭವಿ ಡಾಬಾ ಬಳಿ ನಡೆದಿದೆ.
ಅಪಘಾತ
ಜಗದೀಶ ರಾಮಪ್ಪ ಹೊಸಮನಿ(27) ಮೃತ ದುರ್ದೈವಿ. ಈತ ಅಂತರಗಂಗಿ ಗ್ರಾಮದವನಾಗಿದ್ದು, ಸಿಂದಗಿಯಿಂದ ವಿಜಯಪುರ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭ ಬೈಕ್ ಅಪಘಾತ ಸಂಭವಿಸಿದೆ. ಬೈಕ್ನಲ್ಲಿ ಹಿಂಬದಿ ಕುಳಿತಿದ್ದ ಇನ್ನೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.