ವಿಜಯಪುರ: ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತರಲು ಹೊರಟಿರುವ ಕಾರಣ, ಭಾರತ ಮಾತಾ ಕಿ ಜೈ ಎನ್ನದವರೂ ಸಹ ಇಂದು ದೇಶಕ್ಕೆ ಜೈ ಎನ್ನುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ನಗರದ ದರ್ಬಾರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ಕುರಿತ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲೆಡೆ ಭಾರತ ಮಾತಾ ಕಿ ಜೈ, ಜನಗಣಮನ ಪ್ರಾರಂಭವಾಗಿದೆ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಯಾರು ಒಪ್ಪಲಿ ಬಿಡಲಿ, ಕಾಯ್ದೆ ಜಾರಿಯಾಗುತ್ತೆ. ಲೋಕಸಭೆ, ರಾಜ್ಯಸಭೆ ಒಪ್ಪಿದ ಮೇಲೆ ನೀವು ಒಪ್ಪಲೇಬೇಕು ಎಂದರು. ಕಾಶ್ಮೀರದಲ್ಲಿ 370ನೇ ಕಾಯ್ದೆ ರದ್ದುಗೊಳ್ಖುತ್ತದೆ ಎಂದು ಯಾರು ಊಹಿಸಿರಲಿಲ್ಲ. ಇದೀಗ ಕಾಶ್ಮೀರ ಶಾಂತವಾಗಿದೆ ಎಂದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ತೊಡಕು ಸಹ ನಿವಾರಣೆಯಾಗಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.
ಇನ್ನು ಮಂಗಳೂರು ಗಲಭೆ ವಿಚಾರ ಮಾತನಾಡಿದ ಅವರು, ಕಲ್ಲು ಹೊಡೆಯಲು ಬಂದವರಿಗೆ ಪರಿಹಾರ ನೀಡಬೇಕಾ? ಎಂದು ಪ್ರಶ್ನಿಸಿದರು. ಇದೇ ರೀತಿ ಪರಿಹಾರ ನೀಡಿದರೆ ಅಂಥವರು ಹೆಚ್ಚಾಗುತ್ತಾರೆ ಎಂದು ಶಾಸಕ ಜಮೀರ್ ಅಹ್ಮದ್ ಅವರಿಗೆ ತಿರುಗೇಟು ನೀಡಿದ್ರು.