ವಿಜಯಪುರ: ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಖಂಡಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ
ಕೊರೊನಾ ಭೀತಿ ನಡುವೆ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಮೇಲೆ ದೌರ್ಜನ್ಯವಾಗುತ್ತಿದೆ. ಸರ್ವೆ ಮಾಡಲು ಮನೆಗಳಿಗೆ ಕಾರ್ಯಕರ್ತೆಯರು ಹೋದಾಗ ಕೆಲ ಪಾನಮತ್ತರು ಆಶಾ ಕಾರ್ಯಕರ್ತೆಯರಿಗೆ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಕೊರೊನಾ ಭೀತಿ ನಡುವೆ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಮೇಲೆ ದೌರ್ಜನ್ಯವಾಗುತ್ತಿದೆ. ಸರ್ವೆ ಮಾಡಲು ಮನೆಗಳಿಗೆ ಕಾರ್ಯಕರ್ತೆಯರು ಹೋದಾಗ ಕೆಲ ಪಾನಮತ್ತರು ಆಶಾ ಕಾರ್ಯಕರ್ತೆಯರಿಗೆ ನಿಂದಿಸುತ್ತಿದ್ದಾರೆ. ಸೂಕ್ತ ರಕ್ಷಣೆ ಹಾಗೂ ಕಾಲ ಕಾಲಕ್ಕೆ ಕಾರ್ಯಕರ್ತೆಯರಿಗೆ ವೇತನ ಹಾಗೂ ಆರೋಗ್ಯ ರಕ್ಷಣೆ ಒದಗಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಮನವವಿ ಸಲ್ಲಿಸಿದರು.
ಕೊರೊನಾ ಕರ್ತವ್ಯದ ನಡುವೆ ಮಡಿದ ಇಬ್ಬರು ಆಶಾ ಕಾರ್ಯಕರ್ತೆಯರಿಗೆ ಪರಿಹಾರ ನೀಡಬೇಕು ಹಾಗೂ ಸರಿಯಾದ ಸಮಯಕ್ಕೆ ಆಶಾ ಕಾರ್ಯಕರ್ತೆಯರಿಗೆ ವೇತನ ಪಾವತಿಸಬೇಕು ಎಂದು ಕೋರಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.