ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಸರ್ಕಾರಿ ಶಾಲೆಗೆ ಬಣ್ಣ ಬಳಿಸಿ ಹುಟ್ಟುಹಬ್ಬ ಆಚರಿಸಿದ ಯುವಕ - ವಿಜಯಪುರ ಲೇಟೆಸ್ಟ್​ ನ್ಯೂಸ್​

ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಶ್ರೀರಾಮ ಕಾಲೋನಿಯ ಯುವಕ ತನ್ನದೇ ಕಾಲೋನಿಯ ಸರ್ಕಾರಿ ಶಾಲೆಗೆ 20 ಸಾವಿರ ರೂ. ವೆಚ್ಚದಲ್ಲಿ ಬಣ್ಣ ಬಳಿಸಿ 29ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.

a-young-man-has-painted-a-school
ವಿಜಯಪುರ: ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಗೆ ಬಣ್ಣ ಬಳಿಸಿದ ಯುವಕ

By

Published : Jan 8, 2021, 8:11 PM IST

ವಿಜಯಪುರ: ಯುವಕನೋರ್ವ ತನ್ನ ಹುಟ್ಟುಹಬ್ಬದಂದು ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಬಣ್ಣ ಬಳಿಸುವ ಮೂಲಕ ಶಾಲೆಯ ಅಂದ ಹೆಚ್ಚಿಸಿದ್ದಾನೆ.

ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಗೆ ಬಣ್ಣ ಬಳಿಸಿದ ಯುವಕ

ಜಿಲ್ಲೆಯ ತಿಕೋಟಾ ಪಟ್ಟಣದಶ್ರೀ ರಾಮ ಕಾಲೋನಿಯ ನಿವಾಸಿ ಸುರೇಶ್ ಕೊಣ್ಣೂರ ತನ್ನದೇ ಕಾಲೋನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 20 ಸಾವಿರ ರೂ. ವೆಚ್ಚದಲ್ಲಿ ಬಣ್ಣ ಬಳಿಸುವ ಮೂಲಕ ತನ್ನ 29ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಯುವಕನ ಈ ಕಾಳಜಿಗೆ ಶಿಕ್ಷಕ ಸಮೂಹ ಅಭಿನಂದನೆ‌ ಸಲ್ಲಿಸಿದೆ.

ಸಮಾಜ ಸೇವೆಯಲ್ಲಿ ತೊಡಗಿರುವ ಸುರೇಶ್ ಕೊಣ್ಣೂರ, ಕಳೆದ ವರ್ಷ ಇದೇ ಶಾಲೆಯ 108 ಮಕ್ಕಳಿಗೆ ನೋಟ್​ಬುಕ್ ವಿತರಣೆ ಮಾಡಿದ್ದರು. ಕೊರೊನಾ ಆರಂಭದಲ್ಲಿ ತಮ್ಮ ಕಾಲೋನಿಯ ಜನರಿಗೆ ಮಾಸ್ಕ್ ವಿತರಿಸಿದ್ದರು. ಇದರ ಜೊತೆಗೆ ಕಾಲೋನಿಯಲ್ಲಿರುವ ಪಶು-ಪಕ್ಷಿಗಳಿಗೆ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಿ ಮೆಚ್ಚುಗೆ ಗಳಿಸಿದ್ದರು.

ಓದಿ:ಭಾನುವಾರ ಹಸಿರು ಮಾರ್ಗದಲ್ಲಿ ಬೆಳಗ್ಗೆ 2 ತಾಸು ಮೆಟ್ರೋ ಸಂಚಾರ ಸ್ಥಗಿತ

ABOUT THE AUTHOR

...view details