ವಿಜಯಪುರ: ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ಮನನೊಂದ ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಕೊಲ್ಹಾರ ಸೇತುವೆ ಬಳಿ ನಡೆದಿದೆ.
ರಮೇಶ್ ಮಳೆಪ್ಪನವರ ಹಾಗೂ ಅವರ ಪತ್ನಿ ಮಲ್ಲಮ್ಮ ಆತ್ಮಹತ್ಯೆಗೆ ಯತ್ನಿಸಿದ್ದು, ರಮೇಶ್ ಸಾವನ್ನಪ್ಪಿದರೆ ಪತ್ನಿ ಮಲ್ಲಮ್ಮ ನದಿಗೆ ಹಾರುವಾಗ ಸೀರೆಯ ಸೆರಗು ಸಿಕ್ಕಿ ಹಾಕಿಕೊಂಡು ಪಾರಾಗಿದ್ದಾರೆ.
ನೀರಿನಲ್ಲಿ ಮುಳುಗಿರುವ ಮೃತ ರಮೇಶ್ ಮಳೆಪ್ಪನವರ ದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆದಿದೆ. ನಿನ್ನೆ ಸಂಜೆ ಕೃಷ್ಣಾ ನದಿ ಮೇಲಿನಿಂದ ಹಾರಿದ ಗಂಡ ರಮೇಶನ ಜೊತೆಯಲ್ಲಿ ನದಿಗೆ ಹಾರುವಾಗ ಸೇತುವೆಯ ಗೋಡೆಗೆ ಮಲ್ಲಮ್ಮಳ ಕಾಲು ಸಿಲುಕಿ ದೆ. ಹಾಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಕೊಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀಳಗಿ ತಾಲೂಕಿನ ತೋಳಮಟ್ಟಿ ಗ್ರಾಮದ ನಿವಾಸಿಗಲಾಗಿರುವ ಈ ದಂಪತಿ, ಮದುವೆ ಕಾರ್ಯ ಮುಗಿಸಿಕೊಂಡು ಮಲ್ಲಮ್ಮನ ತವರು ಮನೆ ಬಸವನ ಬಾಗೇವಾಡಿ ತಾಲೂಕಿನ ಸಿದ್ದನಾಥ ಗ್ರಾಮಕ್ಕೆ ಬರುತ್ತಿದ್ದರು. ಈ ವೇಳೆ ಕೊಲ್ಹಾರ ಸೇತುವೆ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಪತಿ ರಮೇಶ್ ಸಾವನ್ನಪ್ಪಿದ್ದು,ಮೃತದೇಹಕ್ಕಾಗಿ ಸ್ಥಳೀಯರು, ಮೀನುಗಾರರು ಹಾಗೂ ಪೊಲೀಸರಿಂದ ಶೋಧಕಾರ್ಯ ಮುಂದುವರೆದಿದೆ.
ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.