ಕರ್ನಾಟಕ

karnataka

ETV Bharat / state

ವಿಜಯಪುರ: ಬೈಕ್​ ಕ್ಯಾಂಟರ್​ ನಡುವೆ ಡಿಕ್ಕಿ ನವದಂಪತಿ ಸಾವು - ಈಟಿವಿ ಭಾರತ ಕನ್ನಡ

ಬೈಕ್​​ ಮತ್ತು ಕ್ಯಾಂಟರ್​ ನಡುವೆ ಅಪಘಾತ ಸಂಭವಿಸಿ ನವದಂಪತಿ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ರಸ್ತೆ ಅಪಘಾತದಲ್ಲಿ  ನವದಂಪತಿ ಸಾವು
ರಸ್ತೆ ಅಪಘಾತದಲ್ಲಿ ನವದಂಪತಿ ಸಾವು

By

Published : Jun 14, 2023, 9:50 AM IST

Updated : Jun 14, 2023, 12:02 PM IST

ವಿಜಯಪುರ: ಟ್ಯಾಂಕರ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನವದಂಪತಿ ಸಾವನ್ನಪ್ಪಿದ್ದಾರೆ. ವಿಜಯಪುರ ನಗರದ ಹೊರವಲಯದ ಸೋಲಾಪುರ ಬೈಪಾಸ್ ಬಳಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಹೊನಮಲ್ಲ ತೆರದಾಳ (31), ಅವರ ಪತ್ನಿ ಗಾಯತ್ರಿ (24) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತ ಹೊನಮಲ್ಲ ಕಳೆದ ಮೇ 22 ರಂದು ಗಾಯತ್ರಿ ಅವರೊಂದಿಗೆ ವಿವಾಹವಾಗಿತ್ತು. ಮದುವೆಯಾಗಿ 24 ದಿನಗಳಲ್ಲಿಯೇ ನವಜೋಡಿ ಸಾವನ್ನಪ್ಪಿದ್ದಾರೆ.

ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಗ್ಯಾಸ್ ಗೀಸರ್​​​ ಸೋರಿಕೆಯಾಗಿ ಜೋಡಿ ಸಾವು:ಹಸೆಮೆಣೆ ಏರಬೇಕಿದ್ದ ಜೋಡಿ ಸ್ನಾನ ಮಾಡುವು ವೇಳೆ ಗ್ಯಾಸ್ ಗೀಸರ್​​​ ಸೋರಿಕೆ ಆಗಿ ಸ್ನಾನಗೃಹದಲ್ಲಿ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನಲ್ಲಿ ಜೂ.12ರಂದು ನಡೆದಿತ್ತು. ಮದುವೆ ಮುನ್ನ ಜೊತೆಯಾಗಿ ಕಾಲ ಕಳೆಯುತ್ತಿದ್ದ ಜೋಡಿ, ಸ್ನಾನಕ್ಕೆಂದು ಹೋಗಿದ್ದರು. ಈ ವೇಳೆ, ಗ್ಯಾಸ್ ಗೀಸರ್​ನಿಂದ ವಿಷ ಅನಿಲ ಸೋರಿಕೆ ಆಗಿ ಇಬ್ಬರು ಸಾವನ್ನಪ್ಪಿದ್ದರು.

ಗುಂಡ್ಲುಪೇಟೆಯ ಚಂದ್ರಶೇಖರ್, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ನಿವಾಸಿ ಸುಧಾರಾಣಿ ಎಂದು ಗುರುತಿಸಲಾಗಿತ್ತು. ಬಾತ್​ರೂಂನ ಕಿಟಕಿ ಹಾಗೂ ಬಾಗಿಲು ಲಾಕ್ ಮಾಡಿ ಸ್ನಾನ ಮಾಡಲು ಮುಂದಾಗಿದ್ದರು. ಈ ವೇಳೆ, ಬಾತ್ ಗೀಸರ್​ನಿಂದ ಕಾರ್ಬನ್ ಮೊನಾಕ್ಸೆಡ್ ಸೋರಿಕೆಯಾಗಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಜೋಡಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು. ಘಟನೆ ನಡೆದು ಎರಡು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ:ಬೆಂಗಳೂರು: ಹಸೆಮಣೆ ಏರಬೇಕಿದ್ದ ಜೋಡಿ... ಗ್ಯಾಸ್ ಗೀಸರ್ ಸೋರಿಕೆಯಾಗಿ ಬಾತ್ ರೂಂನಲ್ಲೇ ಸಾವು!

ವಿದ್ಯುತ್​ ತಗುಲಿ ದಂಪತಿ ಸಾವು:ಜಾತ್ರೆಗೆ ಆಗಮಿಸಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಮಂಗಳವಾರ ನಡೆದಿತ್ತು. ಶಿವು ರಾಠೋಡ್​ (30) ಮತ್ತು ಪತ್ನಿ ತಾರಾಬಾಯಿ ರಾಠೋಡ (26) ಮೃತರು. ಚಿತ್ತಾಪುರದಲ್ಲಿ ನಡೆದ ಹಜರತ್ ಚಿತಾಶಹಾವಲಿ ದರ್ಗಾ ಜಾತ್ರೆಗೆ ದಂಪತಿ ಆಗಮಿಸಿದ್ದರು. ವಿದ್ಯುತ್ ಕಂಬದ ಆಸರೆಗೆಂದು ನೆಲದಲ್ಲಿ ಹೂತಿದ್ದ ತಂತಿಗೆ ವಿದ್ಯುತ್ ಪ್ರವಹಿಸಿದೆ. ಇದರಿಂದ ಅಲ್ಲೆ ನಿಂತಿದ್ದ ನೀರಲ್ಲು ವಿದ್ಯುತ್​ ಪ್ರವಹಿಸಿದೆ. ಮೊದಲು ಪತ್ನಿ ತಾರಾಬಾಯಿಗೆ ವಿದ್ಯುತ್ ಸ್ಪರ್ಶಿಸಿ ಕುಸಿದು ಬಿದ್ದಿದ್ದಾರೆ.

ಪತ್ನಿಯನ್ನು ರಕ್ಷಿಸಲು ಹೋದ ಪತಿ ಶಿವು ರಾಠೋಡ್​ಗೂ ಕೂಡ ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದರು. ಇವರ ರಕ್ಷಣೆಗೆ ಹೋಗಿದ್ದ ಇಬ್ಬರಿಗೆ ಸ್ಥಳೀಯರಿಬ್ಬರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಜಾತ್ರೆಗೆ ಆಗಮಿಸಿದ್ದ ದಂಪತಿ ವಿದ್ಯುತ್‌ ತಂತಿ ತಗುಲಿ ಸಾವು

Last Updated : Jun 14, 2023, 12:02 PM IST

ABOUT THE AUTHOR

...view details