ವಿಜಯಪುರ: ಜಿಲ್ಲೆಯಲ್ಲಿ ಇಂದು 71 ಕೊರೊನಾ ಸೋಂಕಿತ ಪ್ರಕರಣಗಳು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 3,295ಕ್ಕೆ ಏರಿದೆ. 70 ವರ್ಷದ ವೃದ್ಧ ವ್ಯಕ್ತಿ (ರೋಗಿ ಸಂಖ್ಯೆ: 1,33,807) ಮೃತಪಟ್ಟಿರುವುದು ವರದಿಯಾಗಿದೆ.
ವಿಜಯಪುರದಲ್ಲಿ 71 ಕೊರೊನಾ ಸೋಂಕಿತರು ಪತ್ತೆ, ಒಂದು ಸಾವು - Coronavirus update
ವಿಜಯಪುರ ಜಿಲ್ಲೆಯಲ್ಲಿ ಈವರೆಗೂ ದಾಖಲಾದ 3,295 ಸೋಂಕಿತರ ಪೈಕಿ 2,271 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 39 ಮಂದಿ ಸಾವು ವರದಿಯಾಗಿದೆ.
ಕೋವಿಡ್-19 ಆಸ್ಪತ್ರೆ
ಇವರು ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 31ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಇವರು ಅಂತ್ಯಸಂಸ್ಕಾರವನ್ನು ಸರ್ಕಾರದ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ.
ಜಿಲ್ಲೆಯಲ್ಲಿಂದು 78 ಮಂದಿ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 2,271ಕ್ಕೆ ತಲುಪಿದೆ. ಈವರೆಗೂ 39 ಮಂದಿ ಮೃತಪಟ್ಟಿದ್ದು, 985 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ.