ವಿಜಯಪುರ: ಪಾರ್ಕಿಂಗ್ ಸೇರಿದಂತೆ ಅಂದಾಜು 51 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭೂಮಿ ಪೂಜೆ ನೆರವೇರಿಸಿದರು.
51 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಯತ್ನಾಳ್ ಚಾಲನೆ - construction starts in vijaypur
ಜಿಲ್ಲಾಡಳಿತ ಕಚೇರಿ ರಸ್ತೆಯ ಪ್ರವಾಸೋದ್ಯಮ ನಿವೇಶನದಲ್ಲಿ 51 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭೂಮಿ ಪೂಜೆ ನೆರವೇರಿಸಿದರು.
51 ಲಕ್ಷ ನಿರ್ಮಾಣ ಕಾಮಗಾರಿಗೆ ಶಾಸಕ ಯತ್ನಾಳ ಚಾಲನೆ
ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಪ್ರವಾಸೋದ್ಯಮ ನಿವೇಶನದಲ್ಲಿ ಪಾರ್ಕಿಂಗ್, ಪಾತ್ ವೇ ನಿರ್ಮಾಣ ಕಾಮಗಾರಿ ಇದಾಗಿದ್ದು, 4 ತಿಂಗಳ ಹಿಂದೆ ಜಿಲ್ಲಾಡಳಿತ ಇಲ್ಲಿನ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಿತ್ತು.
ಲಾಕ್‌ಡೌನ್ ತೆರವಿನ ಬಳಿಕ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಭೂಮಿ ಪೂಜೆ ಕಾರ್ಯದಲ್ಲಿ ಶಾಸಕ ಯತ್ನಾಳ್ ತೊಡಗಿಕೊಂಡಿದ್ದಾರೆ. ಬಳಿಕ ನಗರದ ಹಲವು ಬಡಾವಣೆಗಳಲ್ಲಿ ಸಿಸಿ ಕಾಮಗಾರಿಗಳ ಆರಂಭಕ್ಕೆ ಪೂಜೆ ಸಲ್ಲಿಸಿದರು.