ವಿಜಯಪುರ: ಕೊರೊನಾ ವೈರಸ್ ಭೀತಿಯಿಂದ ಗುಮ್ಮಟನಗರಿ ತತ್ತರಿಸಿ ಹೋಗಿದ್ದು, ಇಂದು ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತ ಸಂಖ್ಯೆ ಸಂಖ್ಯೆ 20ಕ್ಕೆ ಏರಿದೆ.
ಗುಮ್ಮಟನಗರಿಯಲ್ಲಿ ಮತ್ತೊಂದು ಕೊರೊನಾ ಪ್ರಕರಣ... ಸೋಂಕಿತರ ಸಂಖ್ಯೆ 20ಕ್ಕೇರಿಕೆ - Corona in Vijayapura
ವಿಜಯಪುರದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆಯಾಗುವ ಮೂಲಕ ಕೋವಿಡ್-19 ಸೋಂಕಿತರ ಸಂಖ್ಯೆ 20ಕ್ಕೆ ಏರಿದೆ.
ಗುಮ್ಮಟನಗರಿಯಲ್ಲಿ ಮತ್ತೊಂದು ಕೊರೊನಾ ಪ್ರಕರಣ
ಇಂದು 60 ವರ್ಷದ ವೃದ್ಧನಲ್ಲಿ ಸೋಂಕು ದೃಢಪಟ್ಟಿದ್ದು, ಈತ ರಾಜ್ಯದಲ್ಲಿ 362ನೇ ರೋಗಿಯಾಗಿದ್ದಾನೆ. ಚಪ್ಪರ್ಬಂದ್ ಬಡಾವಣೆಯ ನಿವಾಸಿ ರೋಗಿ ನಂ. 221 ರ 60 ವರ್ಷದ ವೃದ್ಧೆಯಿಂದ ಈತನಿಗೆ ಸೋಂಕು ತಗುಲಿದೆ.
ಮಾರ್ಚ್ 26ರಂದು ಮಹಾರಾಷ್ಟ್ರದ ಇಚಲಕಾರಂಜಿಯಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಹೋದಾಗ ಮಹಾಮಾರಿ ಕೊರೊನಾ ಸೋಂಕು ತಗುಲಿದೆ ಎನ್ನಲಾಗಿದೆ. ಸದ್ಯ ಮೂರು ಕುಟುಂಬಕ್ಕೆ ಸೀಮಿತವಾಗಿರುವ ಸೋಂಕು ಹಬ್ಬುತ್ತಿರುವುದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.