ಕರ್ನಾಟಕ

karnataka

ETV Bharat / state

ಬಂಕ್​ನಲ್ಲಿ ಟ್ಯಾಂಕ್​ ಕ್ಯಾಪ್​ ತೆಗೆದು ಮೋಟಾರ್​ನಲ್ಲಿ ಡೀಸೆಲ್​​ ಕದ್ದ ಚಾಲಾಕಿಗಳು... ಇವರು ಕದ್ದದ್ದೆಷ್ಟು? - Diesel theft in Petrol Bunk

ಪೆಟ್ರೋಲ್​ ಬಂಕ್​ನಲ್ಲಿ 3421 ಲೀ. ಡೀಸೆಲ್ ಕಳ್ಳತನ ಮಾಡಿ ಕಳ್ಳರು ತಮ್ಮ ಕೈ ಚಳಕ ತೋರಿದ ಘಟನೆ ವಿಜಯಪುರದಲ್ಲಿ ನಡೆದಿದೆ.

3421 ಲೀ. ಡೀಸೆಲ್ ಕಳ್ಳತನ

By

Published : Oct 29, 2019, 3:22 PM IST

ವಿಜಯಪುರ:ತಾಳಿಕೋಟಿ ಪಟ್ಟಣದ ಮಿಣಗಲಿ ಕ್ರಾಸ್‌ನಲ್ಲಿರುವ ಶ್ರೀ ನಾಗಾ ಫಿಲ್ಲಿಂಗ್​ ಪೆಟ್ರೋಲ್ ಬಂಕ್ ನಲ್ಲಿ ಅ.25 ರ ಮಧ್ಯರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

ಭಜರಂಗ ಅಗರವಾಲಾ ಎಂಬುವರಿಗೆ ಸೇರಿದ ಬಂಕ್​​ನ ಡಿಸೇಲ್ ಮುಚ್ಚಳಿಕೆ ತೆಗೆದು ಕರೆಂಟ್ ಮೋಟರ್ ಸಹಾಯದಿಂದ 3421 ಲೀ ಡೀಸೆಲ್​​ ಕದ್ದು ಕಳ್ಳರು ಪರಾರಿಯಾಗಿದ್ದರು. ಮರುದಿನ ಡಿಸೇಲ್ ಕಳ್ಳತನವಾಗಿರುವ ಸಿಬ್ಬಂದಿ ಹಾಗೂ ಮಾಲೀಕರ ‌ಗಮನಕ್ಕೆ ಬಂದಿತ್ತು. ಈ ಕುರಿತಾಗಿ ತಾಳಿಕೋಟಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಸೋಮವಾರ ಘಟನಾ ಸ್ಥಳಕ್ಕೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಸ್ ನ್ಯಾಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

3421 ಲೀ. ಡೀಸೆಲ್ ಕಳ್ಳತನ

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಕಳ್ಳತನವಾಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕಳ್ಳತನ‌ ಕುರಿತು ಸೂಕ್ತ ತನಿಖೆ ನಡೆಯಬೇಕು ಎಂಬುದು ಸ್ಥಳೀಯರ ಒತ್ತಾಯ.

ABOUT THE AUTHOR

...view details