ಕಾರವಾರ :ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳ ಪೈಕಿ ಬಚಾವಾಗಿದ್ದ ಯುವತಿ, ಪ್ರಿಯಕರನ ಸಾವಿನಿಂದ ಮನನೊಂದು ಮತ್ತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರದ ಬಿದರಮನೆಯಲ್ಲಿ ತಡರಾತ್ರಿ ನಡೆದಿದೆ.
ವಿಷ ಸೇವಿಸಿ ಬಚಾವಾಗಿದ್ದ ಯುವತಿ ಪ್ರಿಯಕರನ ನೆನಪಲ್ಲಿ ಮತ್ತೆ ಆತ್ಮಹತ್ಯೆ - Murudeshwara
ಹೊನ್ನಾವರ ತಾಲೂಕಿನ ಮಂಕಿಯ ಬೈಲೂರು ಕ್ರಾಸ್ ಬಳಿಯ ಬೆಟ್ಟದಲ್ಲಿ ಪ್ರಿಯಕರ ಗಗನ್ ನಾಯ್ಕ ಜತೆ ಸೇರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮನೆ ಪಕ್ಕದ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.
ಸಂಗೀತಾ ನಾಯ್ಕ (25) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಕಳೆದ ಎರಡು ದಿನದ ಹಿಂದೆ ಹೊನ್ನಾವರ ತಾಲೂಕಿನ ಮಂಕಿಯ ಬೈಲೂರು ಕ್ರಾಸ್ ಬಳಿಯ ಬೆಟ್ಟದಲ್ಲಿ ಪ್ರಿಯಕರ ಗಗನ್ ನಾಯ್ಕ ಜತೆ ಸೇರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಈ ವೇಳೆ ಗಗನ್ ನಾಯ್ಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರಗೊಂಡಿದ್ದ ಸಂಗೀತಾಳನ್ನು ಮಣಿಪಾಲ್ ಆಸ್ಪತ್ರೆಗೆ ಸೆರಿಸಲಾಗಿತ್ತು.
ಗುರುವಾರ ಗುಣಮುಖವಾಗಿ ಮನೆಗೆ ಬಂದಿದ್ದ ಈಕೆ ರಾತ್ರಿ ವೇಳೆ ಯಾರಿಗೂ ತಿಳಿಯದಂತೆ ಮನೆಯ ಕಂಪೌಂಡ್ ಒಳಗೆ ಇದ್ದ ಭಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಿಯಕರ ಮೃತಪಟ್ಟಿದ್ದರಿಂದ ಮನನೊಂದು ಮತ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.