ಕರ್ನಾಟಕ

karnataka

ETV Bharat / state

ಬ್ರಿಟಿಷ್ ಬಾವುಟ ಕೆಳಗಿಳಿಸಿದ ಸವಿನೆನಪು: ಕಾರವಾರದಲ್ಲಿ ವಿಜಯ್ ದಿವಸ್ ಆಚರಣೆ

ನಗರಸಭೆ ಉದ್ಯಾನವನದಲ್ಲಿರುವ ಶಿವಾಜಿ ಮಹಾರಾಜ ಹಾಗೂ ಹೆಂಜಾ ನಾಯ್ಕರ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿ ಪುಷ್ಪಗಳನ್ನು ಅರ್ಪಿಸುವ ಮೂಲಕ ವಿಜಯ್ ದಿವಸ್ ಆಚರಿಸಲಾಯಿತು.

Vijay Diwas Celebration
ವಿಜಯ್ ದಿವಸ್ ಆಚರಣೆ

By

Published : Feb 26, 2021, 3:21 PM IST

ಕಾರವಾರ:ಬ್ರಿಟಿಷರ ಬಾವುಟವನ್ನು ಮೊದಲ ಬಾರಿಗೆ ಕೆಳಗಿಳಿಸಿದುದರ ನೆನಪಿಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ವಿಜಯ ದಿವಸ ಆಚರಣೆ ಮಾಡಲಾಯಿತು.

ನಗರದ ನಗರಸಭೆ ಉದ್ಯಾನವನದಲ್ಲಿರುವ ಶಿವಾಜಿ ಮಹಾರಾಜ ಹಾಗೂ ಹೆಂಜಾ ನಾಯ್ಕರ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿ ಪುಷ್ಪಗಳನ್ನು ಅರ್ಪಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ವಿಜಯ್ ದಿವಸ್ ಆಚರಣೆ

ಈ ಹಿಂದೆ 1725ರಲ್ಲಿ ಪೋರ್ಚುಗೀಸ್ ಆಡಳಿತ ಇದ್ದ ಸಂದರ್ಭದಲ್ಲಿ ಫೆಬ್ರವರಿ 26ರಂದು ಸೋಂದಾ ಅರಸರಾಗಿದ್ದ ಸದಾಶಿವ ನಾಯಕರು ಬ್ರಿಟಿಷರ ಧ್ವಜವನ್ನು ಕೆಳಗಿಳಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ್ದರು. ಇದರ ಸವಿನೆನಪಿಗಾಗಿ ಈ ದಿನವನ್ನು ಪ್ರತಿವರ್ಷ ಕಾರವಾರದಲ್ಲಿ ವಿಜಯ ದಿವಸವನ್ನಾಗಿ ಆಚರಣೆ ಮಾಡುತ್ತಿದ್ದು, ನಗರಸಭೆ ಸದಸ್ಯರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸದಾಶಿವ ನಾಯಕರು ಪ್ರಾರಂಭಿಸಿದ ಸ್ವಾತಂತ್ರ್ಯ ಹೋರಾಟದ ಈ ದಿನವನ್ನ ರಾಜ್ಯ, ರಾಷ್ಟ್ರಮಟ್ಟದಲ್ಲಿ ಆಚರಣೆ ಮಾಡುವ ಮೂಲಕ ಗೌರವ ಸಲ್ಲಿಸಬೇಕಾಗಿದೆ. ಅಲ್ಲದೇ ಇದು ಯಾವುದೇ ಪಕ್ಷಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲವಾಗಿದ್ದು, ಸಾರ್ವಜನಿಕರು ಮುಂದಾಗಿ ವಿಜಯ ದಿವಸ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಶಾಸಕಿ ರೂಪಾಲಿ ನಾಯ್ಕ ಕರೆ ಕೊಟ್ಟರು.

ಇನ್ನು ಇದೇ ವೇಳೆ ನಗರಸಭೆ ಉದ್ಯಾನವನದಿಂದ ಕಾರ್ಯಕರ್ತರು ಬೈಕ್ ಹಾಗೂ ಆಟೋ ರ್ಯಾಲಿ ನಡೆಸುವ ಮೂಲಕ ವಿಜಯ ದಿವಸವನ್ನ ಸಂಭ್ರಮದಿಂದ ಆಚರಿಸಿದರು.

ABOUT THE AUTHOR

...view details